ಮುಳ್ಳೇರಿಯ: ಎಸ್ ಸಿ ಮೋರ್ಚಾ ಜಿಲ್ಲಾ ಸಮಿತಿಯ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಇತ್ತೀಚೆಗೆ ಬದಿಯಡ್ಕ ಪಂಚಾಯತಿನ ಮುಳಿಪರಂಬ್ ಕಾಲನಿ ಸಂದರ್ಶನ ನಡೆಸಲಾಯಿತು.
ಎಸ್ ಸಿ ಮೋರ್ಚಾಜಿಲ್ಲಾ ಸಮಿತಿ ಅಧ್ಯಕ್ಷ ಸಂಪತ್ ಪೆರ್ಣಡ್ಕ, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ ಕೆ ಕಯ್ಯಾರ್, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ ಪೆರಡಾಲ, ಮಂಡಲ ಉಪಾಧ್ಯಕ್ಷ ಉಮೇಶ್ ಮುಳಿಪರಂಬು ನೇತೃತ್ವ ವಹಿಸಿದರು. ಕಾಲನಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಶಿವರಾಮ, ಜೊತೆಕಾರ್ಯದರ್ಶಿಯಾಗಿ ಮಾಧವ, ಹಾಗು ಸಮಿತಿ ಸದಸ್ಯರಾಗಿ, ಗಣೇಶ್, ಜಯಶಂಕರ ಎಂಬಿವರನ್ನು ಆಯ್ಕೆ ಮಾಡಲಾಯಿತು. ಕಾಲನಿಯಲ್ಲಿ ಕುಡಿ ನೀರಿನ ಸಮಸ್ಯೆ, ದಾರಿ ದೀಪ, ಹಲವು ಮುರಿದ ಮನೆಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸಮಿತಿಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭ ಹಿರಿಯ ಕಾರ್ಯಕರ್ತರಾದ ಮತ್ತಡಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಉಮೇಶ್ ಮುಳಿಪರಂಬು ಸ್ವಾಗತಿಸಿ, ಶಿವರಾಮ ವಂದಿಸಿದರು.