ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿದೇಶ ಪ್ರವಾಸದ ಬಗ್ಗೆ ರಾಜಭವನ ತೀವ್ರ ಅಸಮಾಧಾನಗೊಂಡಿದೆ. ಪ್ರವಾಸದ ವಿವರಗಳನ್ನು ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ಲಿಖಿತವಾಗಿ ತಿಳಿಸಿಲ್ಲ ಎಂದು ರಾಜಭವನ ಅಸಮಾಧಾನ ವ್ಯಕ್ತಪಡಿಸಿದೆ.
ರಾಜಭವನಕ್ಕೆ ಪ್ರವಾಸದ ಬಗ್ಗೆ ತಿಳಿಸುವ ವಾಡಿಕೆ ತಪ್ಪಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.
ಇಂದು ಮುಂಜಾನೆ 3.45ಕ್ಕೆ ಕೊಚ್ಚಿಯಿಂದ ಮುಖ್ಯಮಂತ್ರಿ ಹಾಗೂ ಸಚಿವರ ತಂಡ ವಿದೇಶ ಪ್ರವಾಸಕ್ಕೆ ತೆರಳಿದೆ. ಪ್ರವಾಸಕ್ಕೆ ನಿರ್ಧರಿಸಿದಾಗ ಶುರುವಾದ ವಿವಾದಗಳು ಪ್ರವಾಸ ಆರಂಭದ ಈದಿನದ ವರೆಗೂ ಮುಂದುವರಿದಿದೆ. ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಕೈಗೊಂಡಾಗ ರಾಜ್ಯಪಾಲರು, ಸರ್ಕಾರದ ಮುಖ್ಯಸ್ಥರನ್ನು ಭೇಟಿಯಾಗಿ ಪ್ರವಾಸದ ವ್ಯವಸ್ಥೆ ವಿವರಿಸಿ ಲಿಖಿತವಾಗಿ ವಿವರ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ಅದನ್ನು ಉಲ್ಲಂಘಿಸಲಾಗಿದೆ ಎಂದು ರಾಜಭವನ ತಿಳಿಸಿದೆ.
ಮುಖ್ಯಮಂತ್ರಿ ಯುರೋಪ್ ಪ್ರವಾಸದ ಬಗ್ಗೆ ರಾಜಭವನಕ್ಕೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ನಿನ್ನೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಕಣ್ಣೂರಿಗೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರವಾಸದ ಕುರಿತು ಮಾತನಾಡಿದರು. ಹತ್ತು ದಿನಗಳ ಕಾಲ ಯೂರೋಪಿಯನ್ ಪ್ರವಾಸದಲ್ಲಿರುತ್ತಾರೆ ಎಂದು ಹೇಳಿದ್ದರು. ಅವರ ಪ್ರಯಾಣಕ್ಕೆ ರಾಜ್ಯಪಾಲರು ಶುಭ ಹಾರೈಸಿದರು.
ಆದರೆ ಪ್ರವಾಸದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ, ಸಚಿವರು ಮತ್ತು ಇತರ ಅಧಿಕಾರಿಗಳು ನಾರ್ವೆ, ಇಂಗ್ಲೆಂಡ್ ಮತ್ತು ವೇಲ್ಸ್‍ಗೆ ಭೇಟಿ ನೀಡಲಿದ್ದಾರೆ. ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ನಿಧನದ ನಂತರ, ತಂಡವು ನಿಗದಿತ ಸಮಯಕ್ಕಿಂತ ಎರಡು ದಿನ ತಡವಾಗಿ ಇಂದು ಮುಂಜಾನೆ ತೆರಳಿದೆ. ಸಚಿವರಾದ ಪಿ.ರಾಜೀವ್, ವಿ.ಅಬ್ದುರಹಿಮಾನ್ ಮತ್ತಿತರರು ಮುಖ್ಯಮಂತ್ರಿ ಜತೆಗಿದ್ದಾರೆ.
ನಾರ್ವೆ ಭೇಟಿಯು ಸಮುದ್ರ ವಲಯದಲ್ಲಿ ಸಹಕಾರದ ಗುರಿಯನ್ನು ಹೊಂದಿದೆ. ವಿಪತ್ತು ನಿರ್ವಹಣೆ ವಿಧಾನಗಳನ್ನೂ ಪರಿಚಯಿಸಲಾಗುವುದು. ಚರ್ಚೆಯು ವೇಲ್ಸ್‍ನ ಆರೋಗ್ಯ ಕ್ಷೇತ್ರದ ಬಗ್ಗೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಮಾಲೋಚಿಸಲಿದ್ದಾರೆ. ಲಂಡನ್‍ನಲ್ಲಿ ಲೋಕ ಕೇರಳ ಸಭೆಯ ಪ್ರಾದೇಶಿಕ ಸಭೆ ನಡೆಯಲಿದೆ. ಯುಕೆಯ ವಿವಿಧ ವಿಶ್ವವಿದ್ಯಾನಿಲಯಗಳೊಂದಿಗೂ ಸಹಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
"ಮಾಹಿತಿ ಇಲ್ಲ"; ಮುಖ್ಯಮಂತ್ರಿಯವರ ಯುರೋಪ್ ಪ್ರವಾಸದ ಬಗ್ಗೆ ರಾಜಭವನಕ್ಕೆ ಅಸಮಾಧಾನ
0
ಅಕ್ಟೋಬರ್ 04, 2022