HEALTH TIPS

ಅಭಿಚಾರ ಕೊಲೆ: ಶಫಿ ಜೊತೆಗೆ ಇತರ ಆರೋಪಿಗಳು ಇದ್ದಾರೆಯೇ ಎಂಬ ತನಿಖೆ ಸಕ್ರಿಯ


            ಕೊಚ್ಚಿ: ಕೇರಳವನ್ನು ಬೆಚ್ಚಿ ಬೀಳಿಸಿದ್ದ ಇಳಂತೂರಿನ ಜೋಡಿ ಕೊಲೆಗೆ ಕಾರಣವಾದ ‘ಶ್ರೀದೇವಿ’ ಎಂಬ ಫೇಸ್ ಬುಕ್ ಖಾತೆಯ ಚಾಟ್ ಹಿಸ್ಟರಿ ಪತ್ತೆ ಹಚ್ಚಲು ಪೋಲೀಸರು ಮುಂದಾಗಿದ್ದಾರೆ.
          ಇದಕ್ಕಾಗಿ ಫೇಸ್ ಬುಕ್ ಗೆ ಅಧಿಕೃತ ಪತ್ರ ಕಳುಹಿಸುವುದಾಗಿ ಪೋಲೀಸರು ತಿಳಿಸಿದ್ದಾರೆ. ಸೈಬರ್ ಸೆಲ್ ಸಹಾಯದಿಂದ ಆರೋಪಿ ಮೊಹಮ್ಮದ್ ಶಫಿಯ ನಕಲಿ ಖಾತೆ ಮೂಲಕ ರಹಸ್ಯ ವ್ಯವಹಾರಗಳನ್ನು ಹೊರತರಲು ಪ್ರಯತ್ನಿಸಲಾಗುವುದು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಸೈಬರ್ ತಂಡ ನಡೆಸಿದ ಸಾಕ್ಷ್ಯ ಸಂಗ್ರಹದಿಂದ ಹತ್ಯೆಯಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಉತ್ತರ ಸಿಗಲಿದೆ.
         ಪ್ರಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಶಫಿಯ ಪೋನ್ ನಾಶಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಪೋಲೀಸರು ನಂಬಿರಲಿಲ್ಲ. ನಾಶವಾದರೂ ಚಾಟ್ ಮಾಹಿತಿಗಳು ಸಾಕ್ಷಿಯಾಗಿ ಸಿಗುತ್ತವೆ. ಸೈಬರ್ ಸೆಲ್ ಫೇಸ್ ಬುಕ್, ಜಿಮೇಲ್ ಖಾತೆಯ ಪಾಸ್ ವರ್ಡ್, ವಾಟ್ಸ್ ಆಪ್ ಚಾಟ್ ಗಳನ್ನು ಸಂಗ್ರಹಿಸಲಾಗುವುದು. ಗೂಗಲ್ ಡ್ರೈವ್‍ನಂತಹ ಸ್ಟೋರೇಜ್ ಸಿಸ್ಟಮ್‍ಗಳಲ್ಲಿ ಪೋಟೋಗಳು, ವೀಡಿಯೊಗಳು ಸಂಗ್ರಹವಾಗಿದ್ದರೆ, ಅವುಗಳನ್ನು ಕಂಡುಹಿಡಿಯಬಹುದು ಎಂದು ತನಿಖಾ ತಂಡವು ಆಶಿಸುತ್ತಿದೆ.
         ಮನೆಯಲ್ಲಿ ತನಗೂ ಶಫಿಗೂ ಜಗಳವಾಗಿದ್ದು, ಈ ವೇಳೆ ಪೋನ್ ನಾಶಪಡಿಸಿರುವುದಾಗಿ ಶಫಿ ಪತ್ನಿ ನಫೀಸಾ ತಿಳಿಸಿದ್ದಾರೆ. ಶಫಿ ಕೂಡ ಅದನ್ನೇ ಪುನರಾವರ್ತಿಸಿದರು. ಎರಡೂ ಹೇಳಿಕೆಗಳನ್ನು ಪೋಲೀಸರು ನಂಬಿರಲಿಲ್ಲ. ಸುಮಾರು 20 ಗಂಟೆಗೂ ಹೆಚ್ಚು ಕಾಲ ಆರೋಪಿಯನ್ನು ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಪಡೆದುಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಶಫಿ ಮೊದಲಿನಿಂದಲೂ ವಿಚಾರಣೆಗೆ ಸಹಕರಿಸುತ್ತಿಲ್ಲ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries