ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಕಾಸರಗೋಡು ವೆಸ್ಟ್ ಯೂನಿಟ್ ಸಮ್ಮೇಳನ ಕಾಸರಗೋಡಿನ ವಲಯ ಕಚೇರಿಯಲ್ಲಿ ಜರುಗಿತು. ವಲಯ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕಾಸರಗೋಡು ಧ್ವಜಾರೋಹಣ ನಡೆಸಿದರು. ಉಪಾಧ್ಯಕ್ಷ ಮೈಂದಪ್ಪ ಕಾಸರಗೋಡು ಸಮಾರಂಭ ಉದ್ಘಾಟಿಸಿದರು.
ಶ್ರೀಕಾಂತ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಛಾಯಾಚಿತ್ರ ರಂಗದಲ್ಲಿ ಪ್ರಶಸ್ತಿ ವಿಜೇತರಾದ ಮಣಿ ಐ-ಫೋಕಸ್, ದಿನೇಶ್ ಇನ್‍ಸೈಟ್ ಹಾಗೂ ದಿವಾಕರ ಅವರನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಾಸು ಎ, ಜತೆಕಾರ್ಯದರ್ಶಿ ಚಂದ್ರಶೇಖರ, ವಲಯ ಕೋಶಾಧಿಕಾರಿ ರತೀಶ್ ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸುನಿಲ್ ಪಿ.ಟಿ ವರದಿ, ಕೋಶಾಧಿಕಾರಿ ಅಭಿಲಾಷ್ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ವಲಯ ಸಮಿತಿಒಯ 2022-23ನೇ ಸಾಳಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರತೀಶ್ ಎ, ಉಪಾಧ್ಯಕ್ಷರಾಗಿ ವಿನೋದ್, ಕಾರ್ಯದರ್ಶಿ ವಸಂತ ಕೆರೆಮನೆ, ಜತೆಕಾರ್ಯದರ್ಶಿ ವಿಶಾಕ್ ಹಾಗೂ ಕೋಶಾಧಿಕಾರಿಯಾಗಿ ಅಮಿತ್ ಅಂಚನ್ ಅವರನ್ನು ಆಯ್ಕೆ ಮಾಡಲಾಯಿತು.
ಎಕೆಪಿಎ ವೆಸ್ಟ್ ಯೂನಿಟ್ ಸಮ್ಮೇಳನ, ಗೌರವಾರ್ಪಣೆ
0
ಅಕ್ಟೋಬರ್ 04, 2022
Tags