ಕಾಸರಗೋಡು: ಕೇರಳದಲ್ಲಿ ಎಡ-ಐಕ್ಯ ರಂಗಗಳು ದೇಶವಿರೋಧಿ ಒಕ್ಕೂಟದೊಂದಿಗೆ ತಳೆದಿರುವ ಮೃದು ಧೋರಣೆ ಖಂಡಿಸಿ ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ದೇಶ ರಕ್ಷಾ ಸಂಗಮ ಆಯೋಜಿಸಲಾಗುವುದು ಎಂದು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಅವರು ಪಕ್ಷದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಪಕ್ಷದ ಪಂಚಾಯಿತಿ ಪ್ರಧಾನ ಕಾರ್ಯದರ್ಶಿಗಳ ಹಾಗೂ ಇವರಿಗಿಂತ ಮೇಲಿನ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮತೀಯ ಹಾಗೂ ಸಂಘಟನಾ ಚಟುವಟಿಕೆ ಮರೆಯಲ್ಲಿ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದಾಗ ಇದನ್ನು ಬೆಂಬಲಿಸಲು ಮುಂದಾಗದಿರುವುದು ಖಂಡನೀಯ. ಉಭಯ ರಂಗಗಳು ಈ ಸಂಘಟನೆ ರಾಜ್ಯದಲ್ಲಿ ಪ್ರಬಲವಾಗಿ ಬೇರೂರಲು ಪ್ರೋತ್ಸಾಹ ನೀಡುತ್ತಾ ಬಂದಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ, ಪ್ರಮಿಳಾ ಸಿ. ಮಾಯ್ಕ್, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಪಿ.ಸುರೇಶ್‍ಕುಮಾರ್ ಶೆಟ್ಟಿ, ಜಿಲಾ ಪ್ರಧಾನ ಕಾರ್ಯದರ್ಶಿ ವಿಜಯ್‍ಕುಮಾರ್ ರೈ ಉಪಸ್ಥಿತರಿದ್ದರು.
ದೇಶ ವಿರೋಧಿ ಒಕ್ಕೂಟದೊಂದಿಗೆ ಮೃದು ನಿಲುವು: ಬಿಜೆಪಿ ವತಿಯಿಂದ ದೇಶ ರಕ್ಷಾ ಸಂಗಮ
0
ಅಕ್ಟೋಬರ್ 09, 2022