ಕಾಸರಗೋಡು: ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವು ರಾಜ್ಯದ ಕುಟುಂಬಶ್ರೀ ಮಿಷನ್ ನ ಸಹಯೋಗದಲ್ಲಿ ಜಾರಿಗೊಳಿಸಿರುವ ಮಹಿಳಾ ಸಬಲೀಕರಣ ಯೋಜನೆಗೆ ಕಿರು ಹಣಕಾಸು ಸಾಲ ನೀಡಲು ಕುಟುಂಬಶ್ರೀ ನೆರೆಕರೆ Åಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿದಾರರು ಕುಟುಂಬಶ್ರೀಯಿಂದ ಗ್ರೇಡ್ ಪಡೆದ ಪರಿಶಿಷ್ಟ ಜಾತಿಯ ಮಹಿಳೆಯರ ನೆರೆಕರೆ ಕೂಟದ ಸದಸ್ಯರಾಗಿರಬೇಕು. ಪ್ರತಿ ನೆರೆಕರೆಯ ಗುಂಪಿಗೆ ಸಹಾಯಧನದೊಂದಿಗೆ ಗರಿಷ್ಠ 5 ಲಕ್ಷ ರೂ.ಗಳ ಸಾಲವನ್ನು ಮಂಜೂರು ಮಾಡಲಾಗಿದೆ. ಸದಸ್ಯರ ವಯೋಮಿತಿ 18 ರಿಂದ 55 ವರ್ಷಗಳು. ಸದಸ್ಯರ ಕುಟುಂಬದ ವಾರ್ಷಿಕ ಆದಾಯ ರೂ.3,00,000 ಮೀರಬಾರದು. ಸಾಲದ ಬಡ್ಡಿ ದರ ಶೇ. 5 ಮತ್ತುತಿ ಅವಧಿ 3 ವರ್ಷಗಳಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೂ. 49,000 ವಾರ್ಷಿಕ ಆದಾಯ ಹೊಂದಿರುವ ಪ್ರತಿ ಕುಟುಂಬದ ಸದಸ್ಯರಿಗೆ ರೂ 10,000 ಮತ್ತು ನಗರ ಪ್ರದೇಶಗಳಲ್ಲಿ ರೂ 60,000 ಗರಿಷ್ಠ 100,000 ರೂಪಾಯಿ ಸಹಾಯಧನ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ನೆರೆಕರೆ ಗುಂಪುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0467 2204580, 9400068514.)ಸಂಪರ್ಕಿಸುವಂತೆಪ್ರಕಟಣೆ ತಿಳಿಸಿದೆ.
ಸಬ್ಸಿಡಿಯೊಂದಿಗೆ ಕುಟುಂಬಶ್ರೀ ಮೈಕ್ರೋ ಫೈನಾನ್ಸ್ ಸಾಲ ಯೋಜನೆ
0
ಅಕ್ಟೋಬರ್ 30, 2022
Tags