ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಅಡ್ಕತ್ತಬೈಲ್‍ನಲ್ಲಿ ಅಂಡರ್‍ಪಾಸ್‍ಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹೆತ್ತವರು, ಸ್ಥಳೀಯರು ಸೇರಿ ಶಾಲೆಯ ಬಳಿ ಮುಷ್ಕರ ಘೋಷಣಾ ಸಮಾವೇಶ ನಡೆಸಿದರು.
ಅಡ್ಕತ್ತಬೈಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆದ ಮುಷ್ಕರ ಘೋಷಣೆ ಸಮಾವೇಶವನ್ನು ನಗರ ಸಭೆಯ ಉಪಾಧ್ಯಕ್ಷೆ ಸಂಸೀದಾ ಫಿರೋಜ್ ಉದ್ಘಾಟಿಸಿದರು. ಶಾಲಾ ಎಸ್‍ಎಂಸಿ ಅಧ್ಯಕ್ಷ ಪಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಅಧ್ಯಕ್ಷ ಕೆ. ಆರ್. ಹರೀಶ್, ಉದ್ಯಮಿ ಎಂ. ಎಂ. ಮುನೀರ್ ಸೊಕ್ತಬೈಲ್, ಮದರ್ ಪಿಟಿಎ ಅಧ್ಯಕ್ಷ ಎನ್. ಸೀನಾ, ರಾಮಪ್ರಸಾದ್, ನಗರಸಭಾ ಸದಸ್ಯೆ ಹೇಮಲತಾ ಜೆ ಶೆಟ್ಟಿ, ಪೆÇೀಷಕರು ಹಾಗೂ ಸ್ಥಳೀಯರು ಸಂವಾದ ನಡೆಸಿದರು. ಸುಮಾರು ಒಂದುವರೆ ಸಾವಿರ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದು, ವಿದ್ಯಾರ್ಥಿಗಳ ಭದ್ರತೆ ದೃಷ್ಟಿಯಿಂದ ಈ ಪ್ರದೇಶದಲ್ಲಿ ಅಂಡರ್‍ಪಾಸ್ ನಿರ್ಮಾಣ ಅನಿವಾರ್ಯವಾಗಿದೆ. ಅಂಡರ್‍ಪಾಸ್‍ಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿ ಹೆತ್ತವರು ಹಾಗೂ ಪಿಟಿಎ ಪದಾಧಿಕಾರಿಗಳು ತಿಳಿಸಿದ್ದಾರೆ.
ಅಡ್ಕತ್ತಬೈಲಿನಲ್ಲಿ ಅಂಡರ್‍ಪಾಸ್ ಹೋರಾಟದತ್ತ ಶಾಲಾ ವಿದ್ಯಾರ್ಥಿ ಹೆತ್ತವರು, ಸಾರ್ವಜನಿಕರು
0
ಅಕ್ಟೋಬರ್ 28, 2022
Tags