ಮಂಜೇಶ್ವರ: ಕೇರಳ ತುಳು ಅಕಾಡೆಮಿಯ ನೂತನ ಆಡಳಿತ ಮಂಡಳಿಯು ನವೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಮಧ್ಯಾಹ್ನ 2 ಗಂಟೆಗೆ ಕೇಂದ್ರ ಕಚೇರಿಯಾದ ಹೊಸಂಗÀಡಿ ಬಳಿಯ ದುರ್ಗಿಪಳ್ಳದಲ್ಲಿ ಸಚಿವ ಅಹಮದ್ ದೇವರ್ಕೋವಿಲ್ ಅಧಿಕಾರ ಹಸ್ತಾಂತರ ಸಮಾರಂಭ ಉದ್ಘಾಟಿಸುವರು.
2008ರಲ್ಲಿ ಅಂದಿನ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ಅವರಿಂದ ಉದ್ಘಾಟನೆಗೊಂಡ ತುಳು ಅಕಾಡೆಮಿ ಈ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕವಿ ವೆಂಕಟರಾಜ ಪುಣಿಂಚಿತ್ತಾಯರು ಮೊದಲ ಅಧ್ಯಕ್ಷರಾಗಿದ್ದರು. ಪ್ರಸಕ್ತ ಅಕಾಡೆಮಿಯು ದುರ್ಗಿಪಳ್ಳದಲ್ಲಿ ಒಂದು ಎಕರೆ ಜಮೀನು ಹೊಂದಿದ್ದು, 35 ಲಕ್ಷ ವೆಚ್ಚದಲ್ಲಿ ತುಳುಭವನ ನಿರ್ಮಿಸಲಾಗಿದೆ. ಪುಣಿಂಚಿತ್ತಾಯ ಸ್ಮಾರಕ ಗ್ರಂಥಾಲಯವೂ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಕಾಡೆಮಿಯ ವೆಬ್‍ಸೈಟ್ ಮೂಲಕ ಜಗತ್ತಿನಲ್ಲಿರುವ ಯಾರಿಗೆ ಬೇಕಾದರೂ ತುಳು ಕಲಿಯಬಹುದಾಗಿದೆ. ತುಳು ಲಿಪಿ ಪರಿಚಯಿಸುವ ನಿಟ್ಟಿನಲ್ಲಿ'ತೆಂಬರೆ' ಎಂಬ ತ್ರೈಮಾಸಿಕವನ್ನು ಅಕಾಡಮಿ ಈಗಾಗಲೇ ಬಿಡುಗಡೆ ಮಾಡಿದೆ. ನೂತನ ಆಡಳಿತ ಮಂಡಳಿಯು ತುಳುಭಾಷಿಕರ ರಾಷ್ಟ್ರೀಯ ಸಮ್ಮೇಳನ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ನಿರ್ಮಾಣ, ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕೇರಳ ತುಳು ಅಕಾಡೆಮಿ: ನೂತನ ಆಡಳಿತ ಸಮಿತಿ ಅಧಿಕಾರ ಸ್ವೀಕಾರ ಇಂದು
0
ಅಕ್ಟೋಬರ್ 31, 2022
Tags