ಕುಂಬಳೆ: ಕುಂಬಳೆ ಆರಿಕ್ಕಾಡಿ ಓಣಿಬಾಗಿಲಲ್ಲಿರುವ 250 ವರ್ಷಗಳಷ್ಟು ಹಳೆಯದಾದ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ರುದ್ರ ಭೂಮಿ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಸ್ಮಶಾನ ಭೂಮಿಯನ್ನು ಕಳೆದ 250 ವರ್ಷಗಳಿಂದ ಕಾಲನಿವಾಸಿಗಳು ಬಳಸುತ್ತಿದ್ದರು. ಆದರೆ ಪರಿಶಿಷ್ಟ ಜಾತಿಯ ಕೆಲ ಕಾಲನಿವಾಸಿಗಳು ಶವ ಸಂಸ್ಕಾರಕ್ಕೆ ಭಿನ್ನರಾಗ ತೆಗೆದದ್ದರಿಂದ ಗ್ರಾ.ಪಂ. ಅಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಶವ ಸಂಸ್ಕಾರ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಈ ಕುರಿತು ರುದ್ರ ಭೂ ರಕ್ಷಣಾ ಸಮಿತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಿದೆ. ದಾಖಲಾತಿಗಳನ್ನು ಪರಿಶೀಲಿಸಿದ ಆಯೋಗವು 2020ರಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಆಸ್ತಿ ನೋಂದಣಿಗೆ ಭೂಮಿಯನ್ನು ಸೇರಿಸಿ ಹಿಂದೂ ರುದ್ರಭೂಮಿಯಾಗಿ ಸಂರಕ್ಷಿಸಲು ಆದೇಶ ಹೊರಡಿಸಿತು. ಆದರೆ ಪಂಚಾಯತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಮಿತಿಯ ಪದಾಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸ್ಮಶಾನದ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ಇದನ್ನು ತಳ್ಳಿಹಾಕಿ ಆದೇಶ ಹೊರಡಿಸಿದ್ದಾರೆ. ರುದ್ರಭೂಮಿಯನ್ನು ನಿರಾಕರಿಸಲು ಆದೇಶವನ್ನು ಹೊರಡಿಸಲಾಯಿತು. ಸ್ಮಶಾನ ರಕ್ಷಣೆಗಾಗಿ ಮುಷ್ಕರ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಸಮಿತಿ ಪ್ರಕಟಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಮಪ್ಪ ಮಂಜೇಶ್ವರ ಮಾಹಿತಿ ನೀಡಿದರು. ಕಾರ್ಯದರ್ಶಿ ಪದ್ಮನಾಭ, ರಕ್ಷಣಾ ಸಮಿತಿ ಸದಸ್ಯರಾದ ಕುಮಾರನ್, ಜಯರಾಮ್ ಉಪಸ್ಥಿತರಿದ್ದರು.
ಶವ ಸಂಸ್ಕಾರಕ್ಕೆ ಅವಕಾಶ ನಿರಾಕರಣೆ: ರುದ್ರ ಭೂಮಿ ರಕ್ಷಾ ಸಮಿತಿಯಿಂದ ಪ್ರತಿಭಟನೆ ಎಚ್ಚರಿಕೆ
0
ಅಕ್ಟೋಬರ್ 24, 2022
Tags