ಉಪ್ಪಳ: ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಾಸರಗೋಡು ಜಿಲ್ಲಾ ಕಛೇರಿಯ ಸಹಯೋಗದಲ್ಲಿ ಪೈವಳಿಕೆ ಕುಟುಂಬಶ್ರೀ ಸಿ.ಡಿ.ಎಸ್.ಗೆ ಮೈಕ್ರೋ ಕ್ರೆಡಿಟ್ ಸಾಲವನ್ನು ವಿತರಿಸಲಾಯಿತು. ಚೆಕ್ ಹಸ್ತಾಂತರಿಸುವ ಮೂಲಕ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ ಬಿಸಿಡಿಸಿ ಕಾಸರಗೋಡು ವ್ಯವಸ್ಥಾಪಕ ಎನ್.ಎಂ.ಮೋಹನನ್ ನೆರೆಕರೆ ಕೂಟಗಳಿಗೆ ಸಾಲ ವಿತರಿಸಿದರು. ಒಟ್ಟು 34 ಮನೆಗಳಿಗೆ ಎರಡು ಕೋಟಿ ರೂ.ವಿತರಿಸಲಾಯಿತು.
ಪೈವಳಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎನ್.ಪುಷ್ಪಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಚಿಪ್ಪಾರ್, ಸಿಯಾಸುನ್ನಿಸಾ, ಝೆಡ್.ಎ.ಕಯ್ಯಾರ್, ಪಂಚಾಯಿತಿ ಸದಸ್ಯರಾದ ಕೆ.ರಹಮತ್ ರಹಿಮಾನ್, ಇರ್ಶಾನ ಇಸ್ಮಾಯಿಲ್, ಅಶೋಕ ಭಂಡಾರಿ, ಅವಿನಾಶ್ ಮಚಾದೊ, ಕೆ.ಅಬ್ದುಲ್ಲಾ, ಸುನೀತಾ ವಾಲ್ಟಿ ಡಿಸೋಜಾ, ಶ್ರೀನಿವಾಸ ಭಂಡಾರಿ, ಸಿಡಿಎಸ್ ಅಧ್ಯಕ್ಷೆ ಚಂದ್ರಕಲಾ, ವಸಂತ ಶೆಟ್ಟಿ ಹಾಗೂ ಅರವಿಂದ ರಾಜ್ ಮಾತನಾಡಿದರು. ಸಿಡಿಎಸ್ ಎಸ್ ಉಪಾಧ್ಯಕ್ಷೆ ಸುಜಾತಾ ರೈ ಸ್ವಾಗತಿಸಿ, ಪಂಚಾಯತಿ ಕಾರ್ಯದರ್ಶಿ ಕೆ.ಬಿ.ಬಾಲನಾರಾಯಣ ವಂದಿಸಿದರು.
ಮೈಕ್ರೋ ಕ್ರೆಡಿಟ್ ಸಾಲಗಳನ್ನು ವಿತರಣೆ
0
ಅಕ್ಟೋಬರ್ 24, 2022
Tags