ತಿರುವನಂತಪುರ: ವಿಸಿ ನೇಮಕ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇರಳ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ವಿಸಿ ಡಾ.ರಾಜಶ್ರೀ ಎಂ. ನೇಮಕವನ್ನು ರದ್ದುಪಡಿಸಲಾಗಿತ್ತು.
ನಿಯಮಾನುಸಾರ ನೇಮಕಾತಿ ಆಗಿಲ್ಲ ಎಂಬ ವಾದವನ್ನು ಸುಪ್ರೀಂ ಕೋರ್ಟ್‍ನ ಆದೇಶ ಒಪ್ಪಿಕೊಂಡಿದೆ. ಆದರೆ 2010ರ ಯುಜಿಸಿ ನಿಯಮಗಳು ಕೇವಲ ವಿಧೇಯಕ ಸ್ವರೂಪದ್ದಾಗಿವೆ ಎಂದು ವಾದಿಸಲಾಗಿದೆ. ಅದನ್ನು ಜಾರಿಗೊಳಿಸುವ ಬಾಧ್ಯತೆ ಇಲ್ಲ ಎಂದು ಸ್ವತಃ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎನ್ನುತ್ತವೆ ಸರ್ಕಾರಿ ಮೂಲಗಳು. ಶೋಧನಾ ಸಮಿತಿಯನ್ನು ರಚಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಯುಜಿಸಿ ನಿಯಮಗಳನ್ನು ಪರಿಗಣಿಸಿಲ್ಲ ಎಂದು ಸರ್ಕಾರ ಆಕ್ಷೇಪಣೆ ಎತ್ತಿದೆ.
ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಸಿವಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಡಾ.ರಾಜಶ್ರೀ ಅವರ ನೇಮಕ 2013ರ ಯುಜಿಸಿ ನಿಯಮಗಳ ಪ್ರಕಾರವಾಗಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಸುಪ್ರೀಂ ಕೋರ್ಟ್ ಈ ವಾದವನ್ನು ಎತ್ತಿ ಹಿಡಿದಿದೆ. ಫೆಬ್ರವರಿ 2, 2019 ರಂದು, ಡಾ. ರಾಜಶ್ರೀ ಎಂಎಸ್ ಅವರನ್ನು ತಾಂತ್ರಿಕ ವಿಶ್ವವಿದ್ಯಾಲಯದ ವಿಸಿ ಆಗಿ ನೇಮಿಸಲಾಯಿತು. ಇದನ್ನು ಪ್ರಶ್ನಿಸಿ ಕುಸಾಟ್ ನ ಮಾಜಿ ಡೀನ್ ಡಾ.ಶ್ರೀಜಿತ್ ಪಿ.ಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮೂರು ಮಹತ್ವದ ಉಲ್ಲಂಘನೆಗಳನ್ನು ಅರ್ಜಿಯು ಆರೋಪಿಸಿದೆ. ಇವುಗಳಲ್ಲಿ ಮೊದಲನೆಯದು ಉಪಕುಲಪತಿಯನ್ನು ಶಿಫಾರಸು ಮಾಡಲು ಶೋಧನಾ ಸಮಿತಿಯನ್ನು ರಚಿಸುವುದು ಮತ್ತು ಯುಜಿಸಿ ನಿಯಮಗಳ ಪ್ರಕಾರ, ಈ ಸಮಿತಿಯು ರಾಜ್ಯಪಾಲರಿಗೆ ಹೆಸರುಗಳನ್ನು ರವಾನಿಸುತ್ತದೆ. ಆದರೆ ರಾಜಶ್ರೀ ಅವರ ಹೆಸರನ್ನು ಮಾತ್ರ ರಾಜ್ಯಪಾಲರಿಗೆ ಹಸ್ತಾಂತರಿಸಲಾಗಿದೆ. ಈ ಹೆಸರನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಇದು ಯುಜಿಸಿ ನಿಯಮಗಳ ಉಲ್ಲಂಘನೆ ಎಂಬುದು ಪ್ರಮುಖ ಆರೋಪ. ಶೋಧನಾ ಸಮಿತಿಯು ಶಿಕ್ಷಣ ಕ್ಷೇತ್ರದ ಸದಸ್ಯರನ್ನು ಮಾತ್ರ ಒಳಗೊಂಡಿರಬೇಕು. ಆದರೆ ಸರ್ಕಾರ ರಚಿಸಿದ್ದ ಶೋಧನಾ ಸಮಿತಿಯಲ್ಲಿ ಮುಖ್ಯ ಕಾರ್ಯದರ್ಶಿಯೂ ಸದಸ್ಯರಾಗಿದ್ದರು. ಮುಖ್ಯ ಕಾರ್ಯದರ್ಶಿ ಶಿಕ್ಷಣ ಕ್ಷೇತ್ರದಲ್ಲಿ ಪರಿಣತರಲ್ಲ ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ. ಕೊನೆಗೆ ಇದೀಗ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದೆ.
ವಿ.ಸಿ. ನೇಮಕ ರದ್ದು ಪ್ರಕರಣ: ಸರ್ಕಾರದಿಂದ ಮರುಪರಿಶೀಲನಾ ಅರ್ಜಿ
0
ಅಕ್ಟೋಬರ್ 22, 2022
Tags