ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಪೆರಿಯಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಶನಿವಾರ ನಸುಕಿಗೆ ಕುಸಿದು ಬಿದ್ದು, ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ. ಮೇಲ್ಸೇತುವೆ ಸ್ಲ್ಯಾಬ್ ನಿರ್ಮಾಣ ಕಾರ್ಯ ಶನಿವಾರ ಬೆಳಗ್ಗೆ ಆರಂಭಿಸಲಾಗಿದ್ದು, ತಡರಾತ್ರಿ ವರೆಗೆ ಕಾಮಗಾರಿ ಕೊನೆಗೊಂಡಿತ್ತು. ಇದಾದ ಮುರು ತಾಸುಗಳೊಳಗೆ ಮೇಲ್ಸೇತುವೆ ಕುಸಿದುಬಿದ್ದಿದೆ. ಮೂರು ಪಾಳಿಗಳಲ್ಲಿ ಕೆಲಸ ನಡೆದುಬರುತ್ತಿದ್ದು, ರಾತ್ರಿ ಪಾಳಿಯಲ್ಲಿ ಐವರು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯ ಸಂಭವಿಸಿರಲಿಲ್ಲ. ಚೆರ್ಕಳದಿಂದ ನೀಲೇಶ್ವರ ವರೆಗೆ ಮೇಘಾ ಕನ್‍ಸ್ಟ್ರಕ್ಷನ್ಸ್ ಕಂಪೆನಿ ಕೆಲಸದ ಗುತ್ತಿಗೆ ವಹಿಸಿಕೊಂಡಿದ್ದು, ಪೆರಿಯ ಪೇಟೆಯಲ್ಲಿ ಅಂಡರ್ ಪಾಸ್ ಅನ್ವಯ ಮೇಲ್ಸೇತುವೆ ನಿರ್ಮಿಸುತ್ತಿರುವ ಮಧ್ಯೆ ಸ್ಲ್ಯಾಬ್ ಕುಸಿದು ಹಾನಿ ಸಂಭವಿಸಿದೆ. ನಿರ್ಮಾಣಕಾರ್ಯದಲ್ಲಿನ ಲೋಪ ಕುಸಿತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ರಾ.ಹೆದ್ದಾರಿ ಷಟ್ಪಥ ಕಾಮಗಾರಿ: ಪೆರಿಯದಲ್ಲಿ ಮೇಲ್ಸೇತುವೆ ಸ್ಲ್ಯಾಬ್ ಕುಸಿದು ಕಾರ್ಮಿಕಗೆ ಗಾಯ
0
ಅಕ್ಟೋಬರ್ 29, 2022