ಎರ್ನಾಕುಳಂ: ನರಬಲಿ ಸಂತ್ರಸ್ತೆ ಪದ್ಮಾ ಅವರ ಸಂಬಂಧಿಕರ ಕಾಯುವಿಕೆ ಮತ್ತಷ್ಟು ಹೆಚ್ಚುತ್ತಿದೆ. ತಮಿಳುನಾಡು ಮೂಲದ ಪದ್ಮಾ ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದರು. ಮರುದಿನವೇ ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದರು. ಪದ್ಮಾ ನಾಪತ್ತೆ ಪ್ರಕರಣದ ತನಿಖೆ ನಡೆಸುವ ಮೂಲಕ ಕೇರಳವನ್ನೇ ಬೆಚ್ಚಿಬೀಳಿಸಿರುವ ಜೋಡಿ ಕೊಲೆಯ ರಹಸ್ಯ ಬಯಲಾದದ್ದು ಇತಿಹಾಸ.
ನಾಪತ್ತೆಯಾಗಿರುವ ಕುಟುಂಬದವರ ದೂರಿನ ಮೇರೆಗೆ ಪೋಲೀಸರು ತನಿಖೆ ನಡೆಸಿದಾಗ ಪದ್ಮಳನ್ನು ಹತ್ಯೆಗೈದು ನರಬಲಿಯಾಗಿರುವುದು ಪತ್ತೆಯಾಗಿದೆ. ತನಿಖಾ ತಂಡವು ಪದ್ಮಾ ಅವರದೇ ಎಂದು ನಂಬಲಾದ ಅವಶೇಷಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಯಿತು. ಪದ್ಮಾ ಅವರ ಸಂಬಂಧಿಕರು ಡಿಎನ್‍ಎ ಪರೀಕ್ಷೆಯನ್ನು ಪೂರ್ಣಗೊಳಿಸಿ ಮೃತದೇಹವನ್ನು ಆದಷ್ಟು ಬೇಗ ಮನೆಗೆ ಒಯ್ಯಲು ಪ್ರಯತ್ನಿಸುತ್ತಿದ್ದಾರೆ.
ಮೃತದೇಹವನ್ನು ಬಿಡುಗಡೆ ಮಾಡಲು ಪದ್ಮಾ ಅವರ ಪುತ್ರ ಮತ್ತು ಸಹೋದರಿ ಇನ್ನೂ ಕೇರಳದಲ್ಲಿ ತಂಗಿದ್ದಾರೆ ಎಂದು ವರದಿಯಾಗಿದೆ. ಲಾಟರಿ ಟಿಕೆಟ್‍ಗಳನ್ನು ಮಾರುತ್ತಿದ್ದ ಪದ್ಮಾ ಎಂದಿಗೂ ದೂರ ಹೋಗುವುದಿಲ್ಲ ಅಥವಾ ಎರ್ನಾಕುಳಂ ಬಿಟ್ಟು ತೆರಳರು ಎಂಬ ದೃಢ ನಂಬಿಕೆ ಸಂಬಂಧಿಕರಲ್ಲಿತ್ತು. ಪದ್ಮಾ ಅವರ ಇತರ ಸಂಬಂಧಿಕರೂ ತಮಿಳುನಾಡಿನಿಂದ ಕೇರಳಕ್ಕೆ ಬಂದಿದ್ದರು. ಆದರೆ ಮೃತದೇಹವನ್ನು ಪಡೆಯುವ ಪ್ರಕ್ರಿಯೆ ವಿಳಂಬವಾಗಿ ಬಹುತೇಕ ದಿನಗೂಲಿ ಕಾರ್ಮಿಕರೇ ಇರುವುದರಿಂದ ವಾಪಸ್ ತೆರಳಿದ್ದರು.
ಕೆಲಸಕ್ಕೆ ರಜೆ ಹಾಕಿ ಎರ್ನಾಕುಳಂಗೆ ಬಂದಿದ್ದರಿಂದ ಕೆಲಸ ಕಳೆದುಕೊಂಡಿದ್ದೇನೆ ಎಂದು ಪದ್ಮಾ ಅವರ ಪುತ್ರ ಹೇಳಿರುವುದಾಗಿ ವರದಿಯಾಗಿದೆ. ಮೊದಲಿಗೆ ಪದ್ಮಾ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಸಂಬಂಧಿಕರು ಭಾವಿಸಿದ್ದರು. ನಂತರ ನಡೆದಿದ್ದು ದೊಡ್ಡ ದುರಂತ. ಪದ್ಮಾ ಜೊತೆಗೆ ರೊಸಾಲಿ ಎಂಬ ಮಹಿಳೆಯೂ ಬಲಿಯಾಗಿರುವುದು ಬೆಳಕಿಗೆ ಬಂದಿತು. ನಂತರದ ತನಿಖೆಯು ದೇಶವನ್ನೇ ಬೆಚ್ಚಿಬೀಳಿಸುವ ಕ್ರೂರ ಅಪರಾಧವನ್ನು ಬಹಿರಂಗಪಡಿಸಿತು. ಪ್ರಕರಣದಲ್ಲಿ ಪತ್ತನಂತಿಟ್ಟದ ಇಳಂತೂರಿನ ಭಗವಾಲ್ ಸಿಂಗ್ ಮತ್ತು ಅವರ ಪತ್ನಿ ಲೈಲಾ, ಎರ್ನಾಕುಳಂ ಮೂಲದ ಮುಹಮ್ಮದ್ ಶಾಫಿ ಅವರನ್ನು ಬಂಧಿಸಲಾಗಿದೆ.
ಮೃತದೇಹ ಪಡೆಯಲು ರಜೆಮಾಡಿದ್ದರಿಂದ ನಷ್ಟವಾದ್ದು ಉದ್ಯೋಗ: ಮೃತದೇಹ ಇನ್ನಾದರೂ ಸಿಗುತ್ತಾ? ಪದ್ಮಾ ಪುತ್ರನ ಅಳಲು
0
ಅಕ್ಟೋಬರ್ 26, 2022
Tags