ಕಾಸರಗೋಡು: ಕೇರಳ ಎನ್‍ಜಿಒ ಯೂನಿಯನ್ ವಿದ್ಯಾನಗರ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ವಿದ್ವಾನಗರ ಸಿವಿಲ್ ಸ್ಟೇಷನ್ ವಠಾರದಲ್ಲಿ ಹಣ್ಣಿನ ಸಸಿಗಳನ್ನು ನೆಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಒಳಗೊಂಡ ಸಿವಿಲ್ ಸ್ಟೇಶನ್ ವಠಾರದ ಕುರುಚಲು ಕಾಡು ತೆರವುಗೊಳಿಸುವ ಮೂಲಕ ಪ್ರದೇಶ ಸಮಿತಿ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಪ್ರಬೇದಗಳ ಸಸಿಗಳನ್ನು ನೆಡಲಾಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಐಎಎಸ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ರಾಜ್ಯಾಧ್ಯಕ್ಷೆ ಟಿ.ಪಿ.ಉಷಾ, ಕೆ.ಪಿ.ಗಂಗಾಧರನ್, ಭಾನುಪ್ರಕಾಶ್, ಕೆ.ಅನಿಲ್‍ಕುಮಾರ್, ಕೆ.ವಿ.ರಮೇಶನ್ ಉಪಸ್ಥಿತರಿದ್ದರು.
ವಿದ್ಯಾನಗರ ಸಿವಿಲ್ ಸ್ಟೇಶನ್ ವಠಾರದಲ್ಲಿ ಹಣ್ಣಿನ ಸಸಿ ನೆಡುವ ಕಾರ್ಯಕ್ಕೆ ಚಾಲನೆ
0
ಅಕ್ಟೋಬರ್ 12, 2022
Tags