ಬದಿಯಡ್ಕ: ಒಂದು ಧಾರ್ಮಿಕ ಕ್ಷೇತ್ರವು ಅಭಿವೃದ್ಧಿಯನ್ನು ಹೊಂದಬೇಕಾದರೆ ಊರಿನ ಎಲ್ಲರೂ ಜೊತೆಗೂಡಬೇಕು. ಜನರ ಒಗ್ಗೂಡುವಿಕೆಯಿಂದ ಅಲ್ಲಿನ ಸಾನ್ನಿಧ್ಯ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಮೊಗೇರ ಚಾವಡಿಯ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳು ಇಲ್ಲಿ ನಡೆದುಬರುತ್ತಿರುವುದು ಸಂತಸದ ವಿಚಾರವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅರಮನೆಯ ಸಂಪೂರ್ಣ ಬೆಂಬಲ, ಸಹಕಾರವಿದೆ ಎಂದು ಕೊಡ್ಯಮೆ ಅರಮನೆಯ ಪ್ರಧಾನ ಕಾರ್ಯದರ್ಶಿ ಸುದರ್ಶನಪಾಣಿ ಬಲ್ಲಾಳ್ ಹೇಳಿದರು.
ಕನ್ನೆಪ್ಪಾಡಿಯಲ್ಲಿ ಪುನರ್ ನವೀಕರಣಗೊಳ್ಳುತ್ತಿರುವ ಕೊಡ್ಯಮೆ ಅಂತಲ ಮೊಗೇರ ಚಾವಡಿಯ ಅಭಿವೃದ್ಧಿ ಕಾರ್ಯದಂಗವಾಗಿ ಭಾನುವಾರ ನಡೆದ ಅದೃಷ್ಟ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅದೃಷ್ಟ ಚೀಟಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಐ. ಪೆರಿಯಡ್ಕ ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ಜಯದೇವ ಖಂಡಿಗೆ, ಸಾಮಾಜಿಕ ಕಾರ್ಯಕರ್ತ ಮದನ ಮಾಡತ್ತಡ್ಕ, ಕವಿ ಸಾಹಿತಿ ದಯಾನಂದ ರೈ ಕಳುವಾಜೆ, ಆನಂದ ಅಮೃತನಿಲಯ ಬದಿಯಡ್ಕ, ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಸೂರಂಬೈಲು, ಚಿದಾನಂದ ಆಳ್ವ ಮಂಜಕೊಟ್ಟಗೆ, ಎಸ್. ನಾರಾಯಣ ಮುಂಡಿತ್ತಡ್ಕ, ಮಾತೃಶ್ರೀ ಮದರು ಸ್ವಾಮಿಕೃಪಾ, ಪ್ರಗತಿ ಸ್ಪೆಶಲ್ ಸ್ಕೂಲ್ ನಿರ್ದೇಶಕ ಉದಯ ಕುಮಾರ್ ಎಂ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಬೇಬಿ, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿ, ಉಪಾಧ್ಯಕ್ಷ ಕೆ.ಕೆ.ಸ್ವಾಮಿಕೃಪಾ ವಂದಿಸಿದರು.
ಕನ್ನೆಪ್ಪಾಡಿ ಅಂತಲ ಮೊಗೇರ ಚಾವಡಿ ಅಭಿವೃದ್ಧಿ ಅದೃಷ್ಟ ಚೀಟಿ ಬಿಡುಗಡೆ
0
ಅಕ್ಟೋಬರ್ 04, 2022
Tags