ಕುಂಬಳೆ: ಉಪ್ಪಳ ಮಣ್ಣಂಗುಳಿ ದಕ್ಷಿಣ ರಸ್ತೆಯಲ್ಲಿರುವ ರಿಫಾಯಿಯಾ ಮಸೀದಿ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಉಪನ್ಯಾಸ ಕಾರ್ಯಕ್ರಮದ ಭಾಗವಾಗಿ ಇಂದು(ನ.1) ಕೇರಳದ ಖ್ಯಾತ ವಾಗ್ಮಿ ಕುಮ್ಮನಂ ನಿಜಾಮುದ್ದೀನ್ ಅಝ್ಹರಿ ಮೇತ್ರಿ ಅವರು ರಾತ್ರಿ 8 ಕ್ಕೆ ಉಪನ್ಯಾಸ ನೀಡುವರು ಎಂದು ಸಂಬಂಧಪಟ್ಟವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಬ್ರಾಹಿಂ ಕುನ್ನಿಲ್ ಅಧ್ಯಕ್ಷತೆ ವಹಿಸುವರು.ಖಾಲಿದ್ ಬಾಖವಿ ಉದ್ಘಾಟಿಸುವರು. ಅಬ್ದುಲ್ ಕಾದಿರ್, ಮೊಯ್ದೀನ್ ಹಾಜಿ ಮೊದಲಾದವರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಕೊಕ್ಕೆಜಾಲ್ ಖಾಲಿದ್ ಬಾಖವಿ ಉಸ್ತಾದ್ (ವಾಫಿ ಕಾಲೇಜು ಪ್ರಾಂಶುಪಾಲರು ಮತ್ತು ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕುನ್ನಿಲ್ (ಟ್ರಸ್ಟ್ ಕೋಶಾಧಿಕಾರಿ), ಮೊಯ್ದೀನ್ ಹಾಜಿ ಕೊಳಚ್ಚಪ್(ಸದಸ್ಯರು), ಸಾಲಿ ಮುಹಮ್ಮದ್ (ಉಪ ಸಮಿತಿ ಸದಸ್ಯರು) ಮತ್ತು ಅಬ್ದುಲ್ ಖಾದರ್ (ಉಪ ಸಮಿತಿ ಸದಸ್ಯರು) ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಖ್ಯಾತ ವಾಗ್ಮಿ ಕುಮ್ಮನಂ ನಿಜಾಮುದ್ದೀನ್ ಅಝ್ಹರಿ ಅವರಿಂದ ಮಣ್ಣಂಗುಳಿಯಲ್ಲಿ ಉಪನ್ಯಾಸ ಇಂದು
0
ಅಕ್ಟೋಬರ್ 31, 2022
Tags