ತಿರುವನಂತಪುರ: ಅಮಲುಪದಾರ್ಥಗಳ ವಿರುದ್ದ ಜಾಗೃತಿಗೆ ಸಂಬಂಧಿಸಿದಂತೆ ರಾಜ್ಯದ ಶಾಲೆಗಳಲ್ಲಿ ಭಾನುವಾರ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ಮುಖ್ಯಮಂತ್ರಿಗಳು ಭಾಗವಹಿಸುವ ಉದ್ಘಾಟನಾ ಸಮಾರಂಭವನ್ನೂ ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ವಿ.ಶಿವಂ ಕುಟ್ಟಿ ಮಾಹಿತಿ ನೀಡಿದ್ದಾರೆ.
ಅಮಲು ಪದಾರ್ಥಗಳ ವಿರುದ್ಧ ಹೋರಾಟದ ಅಂಗವಾಗಿ ಕೇರಳ ಸಶಸ್ತ್ರ ಪೆÇಲೀಸ್ ಹಾಗೂ ಸ್ಟೂಡೆಂಟ್ ಪೆÇಲೀಸ್ ಕೆಡೆಟ್‍ಗಳು ಆಯೋಜಿಸಿದ್ದ ರ್ಯಾಲಿಯನ್ನೂ ಮುಂದೂಡಲಾಗಿದೆ. ತಿರುವನಂತಪುರದಲ್ಲಿ ಭಾನುವಾರ ನಡೆಯಬೇಕಿದ್ದ ಸಾಮಾಜಿಕ ಐಕ್ಯತಾ ಮೆರವಣಿಗೆಯ ಉದ್ಘಾಟನಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ ಎಂದು ಸಚಿವ ಕೆ ರಾಧಾಕೃಷ್ಣನ್ ತಿಳಿಸಿದ್ದಾರೆ.
ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಕೊಡಿಯೇರಿ ಬಾಲಕೃಷ್ಣನ್ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಚೆನ್ನೈ ಅಪೆÇೀಲೋ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೃತದೇಹವನ್ನು ಇಂದು ಕಣ್ಣೂರಿಗೆ ತರಲಾಗಿದೆ. ಕೊಡಿಯೇರಿ ಅವರ ಪಾರ್ಥಿವ ಶರೀರವನ್ನು ಚೆನ್ನೈನಿಂದ ಏರ್ ಆ್ಯಂಬುಲೆನ್ಸ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಕಣ್ಣೂರಿಗೆ ತರಲಾಯಿತು. 11 ರಂದು ಕಣ್ಣೂರು ವಿಮಾನ ನಿಲ್ದಾಣದಿಂದ ತಲಶ್ಶೇರಿಯವರೆಗೆ ಶವಯಾತ್ರೆಯಾಗಿ ಕೊಂಡೊಯ್ಯಲಾಯಿತು.
ಕೊಡಿಯೇರಿ ನಿಧನ: ಸರ್ಕಾರದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಉದ್ಘಾಟನೆ ಮುಂದೂಡಿಕೆ
0
ಅಕ್ಟೋಬರ್ 02, 2022