ಕಾಸರಗೋಡು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಅಸೋಸಿಯೇಶನ್ ಅಬಕಾರಿ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್ 25 ರಂದು ಕಾಸರಗೋಡಿನಿಂದ ತಿರುವನಂತಪುರದವರೆಗೆ ಮಾದಕ ವಸ್ತು ಮುಕ್ತ ಸಂದೇಶದೊಂದಿಗೆ ಬೈಕ್-ಸೈಕಲ್ ಜಾಥಾ ವನ್ನು ನಡೆಸಲಾಗುವುದು. ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಲ್ಲಿ ಬೆಳಗ್ಗೆ 10:00 ಗಂಟೆಗೆ ಸ್ಥಳೀಯ ಆಡಳಿತ ಖಾತೆ ಮತ್ತು ಅಬಕಾರಿ ಇಲಾಖೆ ಸಚಿವ ಎಂ. ಬಿ. ರಾಜೇಶ್ ಉದ್ಘಾಟಿಸುವರು. ಜನಪ್ರತಿನಿಧಿಗಳು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸುವರು. ಕಾರ್ಯಕ್ರಮದ ಸಂಘಟಕ ಸಮಿತಿ ರೂಪೀಕರಣದ ಸಭೆಯನ್ನು ಶಾಸಕ ಎನ್. ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಗೈಡ್ಸ್ ವಿಭಾಗದ ಜಿಲ್ಲಾಧಿಕಾರಿ ಶ್ರೀಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ. ವಿ. ಪುಷ್ಪಾ ಮುಖ್ಯ ಅತಿಥಿಯಾಗಿದ್ದರು. ರೋವರ್ ವಿಭಾಗದ ರಾಜ್ಯ ಆಯುಕ್ತ ಅಜಿತ್ ಸಿ. ಕಳನಾಡ್ ಜಾಥಾದ ಕುರಿತು ವಿವರಣೆ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಕುಂuಟಿಜeಜಿiಟಿeಜ ಶುಕ್ರಿಯಾ, ಕಾಸರಗೋಡು ಎಇಒ ಅಗಸ್ಟಿನ್ ಬರ್ನಾಡ್, ಅಬಕಾರಿ ಇಲಾಖೆ ಪ್ರತಿನಿಧಿ ಎ ಕೃಷ್ಣನ್, ಕಿರಣ್ ಪ್ರಸಾದ್ ಕೂಡ್ಲು ಎಂಬಿವರು ಮಾತನಾಡಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ರಕ್ಷಾಧಿಕಾರಿಯಾಗಿ ಯೂ, ಶಾಸಕರಾದ ಎನ್. ಎ. ನೆಲ್ಲಿಕುನ್, ಎ. ಕೆ. ಎಂ. ಅಶ್ರಫ್ , ಅಡ್ವ ಸಿ. ಎಚ್. ಕುಂಞಂಬು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಅಬಕಾರಿ ಉಪ ಆಯುಕ್ತ ಡಿ. ಬಾಲಚಂದ್ರನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ. ವಿ. ಪುಷ್ಪಾ ಎಂಬಿವರನ್ನು ರಕ್ಷಾಧಿಕಾರಿ ಗಳಾಗಿಯೂ ಜಿಲ್ಲಾ ಕಾರ್ಯದರ್ಶಿ ಕೆ. ಭಾರ್ಗವಿಕುಟ್ಟಿ ಅವರನ್ನು ಸಂಚಾಲಕರಾಗಿ ಯೂ ಆಯ್ಕೆ ಮಾಡಲಾಯಿತು.
ಮಾದಕ ವಸ್ತು ಮುಕ್ತ ಸಂದೇಶದೊಂದಿಗೆ ಬೈಕ್, ಸೈಕಲ್ ಜಾಥಾ-ಸ್ವಾಗತ ಸಮಿತಿ ರಚನೆ
0
ಅಕ್ಟೋಬರ್ 16, 2022