ಕಾಸರಗೋಡು: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 38ನೇ ಸಂಸ್ಮರಣಾ ಸಮಾರಂಭ ಜಿಲ್ಲೆಯ ವಿವಿಧೆಡೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಇಂದಿರಾಗಾಂಧಿ ಭಾವಚಿತ್ರಕ್ಕೆ ಪಷ್ಪಾರ್ಚನೆ ನಡೆಸಿದರು. ಮುಖಂಡರಾದ ಪಿ.ಎ ಅಶ್ರಫಲಿ, ಕೆ. ಮಣಿಕಂಠನ್, ಆರ್. ಗಂಗಾಧರನ್ ಮುಂತಾದವರು ಉಪಸ್ಥಿತರಿದ್ದರು.
ಕೇರಳ ಎನ್‍ಜಿಒ ಅಸೋಸಿಯೇಶನ್ ಕಾಸರಗೋಡು ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಸಂಸ್ಮರಣೆ ನಡೆಯಿತು. ಜಿಲ್ಲಾಧ್ಯಕ್ಷ ಎ.ಟಿ.ಶಶಿ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಕೆ.ಸಿ.ಸುಜಿತ್ ಕುಮಾರ್, ರಾಜ್ಯ ಕಾರ್ಯದರ್ಶಿಗಳು, ಕೆ ಎಂ ಜಯಪ್ರಕಾಶ್,ಪಿ.ಕುಂಜಿಕೃಷ್ಣನ್, ವಿ.ಎಂ.ರಾಜೇಶ್, ಶ್ರೀನಿಮೋನ್.ಎಂ.ಕೆ.,ವಿಟಿಪಿ ರಾಜೇಶ್, ಸುನಿಲ್ ಜೋಸೆಫ್ ಉಪಸ್ಥಿತರಿದ್ದರು.
ಕಾಸರಗೋಡಿನ ವಿವಿಧೆಡ ಮಾಜಿಪ್ರಧಾನಿ ಇಂದಿರಾಗಾಂಧಿ ಸಂಸ್ಮರಣೆ
0
ಅಕ್ಟೋಬರ್ 31, 2022
Tags