ಉಪ್ಪಳ: ಅಗಲಿದ ಸಿ ಪಿ ಎಂ ಪಕ್ಷದ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿಯಾಗಿದ್ದ , ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಸರ್ವಪಕ್ಷದ ಶ್ರದ್ಧಾಂಜಲಿ ಸಭೆ ಕುಡಾಲುಮೇರ್ಕಳದ ಕುಂಟಂಗೇರಡ್ಕದಲ್ಲಿ ನಡೆಯಿತು.
ಪಕ್ಷದ ಹಿರಿಯ ನಾಯಕ ಬಿ.ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ನಾಯಕ ಬಾಡೂರು ವಿಠಲ ರೈ ಉದ್ಘಾಟಿಸಿದರು. ವಿವಿಧ ಪಕ್ಷಗಳ ನಾಯಕರಾದ ಅಚ್ಯುತ ಚೇವಾರ್, ಬಿ ಕೆ ಖಾದರ್, ಎಸ್ ಬಾಲಕೃಷ್ಣ ಶೆಟ್ಟಿ, ಮಹಮ್ಮದ್ ರೋಡ್‍ಕರೆ, ವಿಜಯ ಕುಮಾರ್ ಪೆರ್ಮುದೆ, ಅಬ್ದುಲ್ಲ ಅಜೀಜ್ ಚೇವಾರ್, ಭಾರತಿ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿದರು. ಬಿ ಎ ಬಶೀರ್ ಸ್ವಾಗತಿಸಿ, ಬಿ ಎ.ಲತೀಫ್ ವಂದಿಸಿದರು.
ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಸರ್ವಪಕ್ಷದ ಶ್ರದ್ಧಾಂಜಲಿ
0
ಅಕ್ಟೋಬರ್ 08, 2022
Tags