HEALTH TIPS

ಶಿವಶಂಕರ್ ಅವರು ಚೆನ್ನೈನ ದೇವಸ್ಥಾನದಲ್ಲಿ ತನಗೆ ತಾಳಿ ಕಟ್ಟಿ ಹಣೆಗೆ ಕುಂಕುಮವಿರಿಸಿದ್ದರು!: ಆತ್ಮಕಥೆಯಲ್ಲಿ ಮಹತ್ತರ ಗೌಪ್ಯ ಬಯಲುಗೊಳಿಸಲಿರುವ ಸ್ವಪ್ನಾ ಸುರೇಶ್

                 ತಿರುವನಂತಪುರ: ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ಆತ್ಮಕಥೆಯೊಂದಿಗೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಅವರ ಆತ್ಮಕಥೆಯೂ ಶೀಘ್ರ ಪ್ರಕಟಗೊಳ್ಳುವ ಸೂಚನೆಯಿದೆ.
               ಸ್ವಪ್ನಾ ಅವರು ತಮ್ಮ ಆತ್ಮಚರಿತ್ರೆ 'ಚಾಟಿಯ ಪದ್ಮವ್ಯೂಹಮ್' ನಲ್ಲಿ ನಿರ್ಣಾಯಕ ಗೌಪ್ಯಗಳನ್ನು ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್, ಮುಖ್ಯಮಂತ್ರಿ ಪುತ್ರಿ ವೀಣಾ ಮತ್ತು ಕಾರಾಗೃಹದ ಡಿಐಜಿ ಅಜಯಕುಮಾರ್ ವಿರುದ್ಧ ಆರೋಪಗಳಿವೆ ಎನ್ನಲಾಗಿದೆ. ಮ್ಯಾಜಿಸ್ಟ್ರೇಟ್‍ಗೆ ನೀಡಿದ ಹೇಳಿಕೆಯಲ್ಲಿ ಏನು ಹೇಳಲಾಗಿದೆ ಮತ್ತು ಏನು ಹೇಳಿಲ್ಲ ಎಂಬುದನ್ನು ಪುಸ್ತಕ ಒಳಗೊಂಡಿದೆ.
                 ಚೆನ್ನೈನ ದೇವಸ್ಥಾನವೊಂದರಲ್ಲಿ ಎಂ.ಶಿವಶಂಕರ್ ತನ್ನ ಕೊರಳಿಗೆ ತಾಳಿ ಕಟ್ಟಿದ್ದರು ಎಂದು ಸ್ವಪ್ನಾ ಆತ್ಮಕಥೆ ಹೇಳುತ್ತದೆ. ತಾಳಿ ಕಟ್ಟಿಕೊಂಡು ಹಣೆಗೆ ಕುಂಕುಮ ಇಟ್ಟು ನಿನ್ನನ್ನು ಕೈಬಿಡುವುದಿಲ್ಲ ಎಂದಿದ್ದರು. ಅಧಿಕೃತ ಪ್ರವಾಸಕ್ಕೆಂದು ಪಕ್ಕದ ರಾಜ್ಯಕ್ಕೆ ಹೋದಾಗ ತಾಳಿ ಕಟ್ಟಲಾಗಿತ್ತು. ತಾನು ಶಿವಶಂಕರನ ಪಾರ್ವತಿಯಾದೆ.  ಚಿನ್ನ ಕಳ್ಳಸಾಗಣೆ ವಿವಾದದಲ್ಲಿ ಇಬ್ಬರನ್ನೂ ಬಂಧಿಸಿದಾಗ ಎನ್‍ಐಎ ಕಚೇರಿಯಲ್ಲಿ ಶಿವಶಂಕರ್ ಅವರನ್ನು ಭೇಟಿಯಾದಾಗ ತನ್ನ ಕುತ್ತಿಗೆಯಲ್ಲಿ ಹಳದಿ ದಾರದಲ್ಲಿ ತಾಳಿ ಇತ್ತೆಂದು ಸ್ವಪ್ನಾ ಹೇಳುತ್ತಾರೆ.
              ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸರ್ಕಾರ ಅಥವಾ ಅದರ ಪ್ರತಿನಿಧಿಗಳ ಪಾತ್ರವಿಲ್ಲ, ಎಲ್‍ಡಿಎಫ್ ಆಡಳಿತವನ್ನು ಮುಂದುವರಿಸಲು ತಾನು ಧ್ವನಿ ಸಂದೇಶವನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಸ್ವಪ್ನಾ ಹೇಳುತ್ತಾರೆ. ನಿರಂತರ ಆಡಳಿತ ಸಿಗದಿದ್ದರೆ ಪ್ರಕರಣದ ತನಿಖೆಯ ವಿಧಾನವೇ ಬದಲಾಗಲಿದೆ ಎಂದ ಸ್ವಪ್ನಾ ಸುರೇಶ್, ಮತ್ತೆ ಅಧಿಕಾರಕ್ಕೆ ಬರಲು ಎಲ್‍ಡಿಎಫ್ ಕೂಡ ಬೇಕು ಎಂದು ಸಂದೀಪ್ ಫೆÇೀನ್‍ನಲ್ಲಿ ಆಡಿಯೋ ರೆಕಾರ್ಡ್ ಮಾಡಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries