HEALTH TIPS

ಗ್ರಹಣ ಹಿಡಿದ ವಾಟ್ಸ್‌ಆಯಪ್​ ಸರಿ ಹೋಯ್ತು; ಆದರೂ ಇವೆ ಕೆಲವು ಗ್ಲಿಚ್​ಗಳು

 

              ನವದೆಹಲಿ: ಮೆಟಾ ಸಂಸ್ಥೆ ಅಧೀನದಲ್ಲಿರುವ ವಾಟ್ಸ್‌ಆಯಪ್​ ಕೆಲ ಗಂಟೆಗಳಿಂದ (ಅ.25) ಸ್ಥಗಿತಗೊಂಡಿತ್ತು. ದೇಶಾದ್ಯಂತ ಬಳಕೆದಾರರು ಈ ಬಗ್ಗೆ ರಿಪೋರ್ಟ್ ಮಾಡಿದ್ದರು. ಸುಮಾರು 12.30ಕ್ಕೆ ನಿಂತುಹೋಗಿದ್ದ ವಾಟ್ಸಪ್​ ಮಧ್ಯಾಹ್ನ 2.16 ಸುಮಾರಿಗೆ ಮತ್ತೆ ಕಾರ್ಯ ನಿರ್ವಹಿಸತೊಡಗಿದೆ.

            ಡೌನ್ ಡಿಟೆಕ್ಟರ್​ ಎನ್ನುವ ಸಂಸ್ಥೆ (ವೆಬ್​ಸೈಟ್​) ಪ್ರಕಾರ ಇಂದು ಮಧ್ಯಾಹ್ನ 12.30ರಿಂದ ವಾಟ್ಸ್‌ಆಯಪ್​​ ಸ್ಥಗಿತಗೊಂಡಿತ್ತು. ಈ ವೆಬ್​ಸೈಟ್​ನ ಮಾಹಿತಿ ಪ್ರಕಾರ ಮುಂಬೈ, ದೆಹಲಿ, ಕೋಲ್ಕತ್ತ, ಬೆಂಗಳೂರು, ಚೆನ್ನೈ, ಹೈದರಾಬಾದ್ ಜೊತೆಗೆ ನಾಗ್ಪುರ ಮತ್ತು ಲಖ್ನೌ ಸೇರಿದಂತೆ ಇತರೆ ನಗರಗಳಲ್ಲಿ ಸಮಸ್ಯೆ ಎದುರಾಗಿತ್ತು.

               ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಟಾ ಸಂಸ್ಥೆಯ ವಕ್ತಾರ 'ನಾವು ಸಂದೇಶ ಕಳಿಸುವ ವಿಷಯದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ವಾಟ್ಸ್‌ಆಯಪ್​ ಅನ್ನು ಶೀಘ್ರದಲ್ಲಿಯೇ ಎಲ್ಲರೂ ಬಳಸಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದರು. ಈಗ ವಾಟ್ಸಪ್ ಮತ್ತೆ ಸೇವೆ ಪ್ರಾರಂಭಿಸಿದರೂ ಕೆಲವು ಗ್ಲಿಚ್​ಗಳಿವೆ ಎಂದು ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries