ಕಾಸರಗೋಡು: ಮೊಗ್ರಾಲ್ ಪುತೂರ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಳೆದ ಕೆಲವು ವಾರಗಳಿಂದ ವಿದ್ಯುತ್ ಮತ್ತು ಇಂಟರ್‍ನೆಟ್ ಸಂಪರ್ಕ ಅಸ್ತವ್ಯಸ್ತಗೊಂಡಿರುವುದರಿಂದ ಪಂಚಾಯಿತಿಯ ಫ್ರಂಟ್ ಆಫೀಸ್ ಚಟುವಟಿಕೆಗಳಿಗೆ ಸಮಸ್ಯೆಯುಂಟಾಗಿದೆ.
ಅಕ್ಟೋಬರ್ ಆರಂಭದಲ್ಲಿ ಹಲವಾರು ರಜೆಗಳ ನಂತರ, ಪಂಚಾಯಿತಿಯ ಮುಂಭಾಗ ಕಚೇರಿಯು ನಾಲ್ಕೈದು ದಿನಗಳು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸಿದೆ. ಸೂಕ್ತ ವ್ಯವಸ್ಥೆಯಿಲ್ಲದಿರುವುದರಿಂದ ಸಾರ್ವಜನಿಕರು ಅರ್ಜಿಯನ್ನು ಸಲ್ಲಿಸಲು ಅಥವಾ ಅರ್ಜಿಯ ಮೇಲೆ ನೀಡಿದ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಪಂಚಾಯಿತಿಯ ಫ್ರಂಟ್ ಆಫೀಸ್ ಐಎಲ್‍ಜಿಎಸ್‍ಎಂ ಗೆ ಬದಲಾದುದರಿಂದ ಇಂಟರ್ನೆಟ್ ಸೌಲಭ್ಯವಿಲ್ಲದೆ ಚಟುವಟಿಕೆ ನಡೆಸದ ಸ್ಥಿತಿಯಲ್ಲಿದೆ. ಈ ನಿರಂತರ ಸಮಸ್ಯೆಯನ್ನು ತಪ್ಪಿಸಲು ಪಂಚಾಯಿತಿ ಜನರೇಟರ್ ಸೌಲಭ್ಯ ಅಳವಡಿಸಿಕೊಳ್ಳುವುದಾಗಲಿ, ಯಾವುದೇ ನೂತನ ಇಂಟರ್ನೆಟ್ ಸೌಲಭ್ಯ ಪಡೆಯಲು ಮುಂದಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರನ್ನು ಪ್ರಶಿನಿಸಿದಾಗ ಅಧ್ಯಕ್ಷರು ಹಾಗೂ ಸಿಬ್ಬಂದಿ ಜನರಿಗೆ ಸೂಕ್ತ ಉತ್ತರ ನೀಡದೆ ನುಣುಚಿಕೊಳ್ಳುತ್ತಿರುವುದಾಗಿ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.