HEALTH TIPS

ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದ ಸಮಾರೋಪ


           ಕಾಸರಗೋಡು: ಉತ್ಸವಗಳನ್ನು ಆಚರಿಸುವ ಮೂಲಕ ವೈಭÀವಯುತವಾದ ಪರಂಪರೆ, ಸಂಸ್ಕøತಿ, ಸಂಪ್ರದಾಯ ಮತ್ತು ಭಾರತೀಯ ಸಾಂಸ್ಕøತಿಕ ಮೌಲ್ಯವನ್ನು ಸಂರಕ್ಷಿಸಿ ಬೆಳೆಸುವ ಕಾರ್ಯ ನಡೆಯುತ್ತದೆ. ಆರಾಧÀನೆಯ ಜೊತೆಗೆ ಕಲೆ ಸಾಹಿತ್ಯವನ್ನು ಯುವ ತಲೆಮಾರಿಗೆ ಹಸ್ತಾಂತರಿಸುವ ಬಹುದೊಡ್ಡ ಕೆಲಸವಾಗುತ್ತದೆ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
            ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕøತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಘಟಕ, ಗಡಿನಾಡು ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಹತ್ತು ದಿನಗಳಿಂದ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಆಯೋಜಿಸಿದ ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದ ಸಮಾರೋಪ ಸಮಾರಂಭವನ್ನು ಎಡನೀರು ಮಠದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.    
           ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಮಾತನಾಡಿ ಮೈಸೂರು ದಸರಾದ ಇತಿಹಾಸವನ್ನು ಬಿಚ್ಚಿಟ್ಟು, ಈ ವರ್ಷದಿಂದ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಣ್ಣೂರು ದಸರಾ ಆಯೋಜಿಸಲಾಗಿದೆ. ಅದೇ ರೀತಿ ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದ ಮೂಲಕ ಪರಂಪರೆಯನ್ನು ಉಳಿಸುವ  ಮಹತ್ವದ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳನ್ನು ಶ್ಲಾಘಿಸಿದರು.
           ಸಂಕೀರ್ತನಾ ಸಾಮ್ರಾಟ್ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಜಾನಪದ ಪರಿಷತ್ ದ.ಕ. ಜಿಲಾಧ್ಯ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‍ಬೈಲ್ ಶುಭಾಶಂಸನೆಗೈದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕುಂಬ್ಡಾಜೆ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಗೋಸಾಡ, ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದ ಪ್ರಧಾನ ಸಂಚಾಲಕ ಅಖಿಲೇಶ್ ನಗುಮುಗಂ, ಸಂಚಾಲಕ ಪ್ರದೀಪ್ ಬೇಕಲ್, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
           ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಜಗದೀಶ್ ಕೂಡ್ಲು ವಂದಿಸಿದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries