ಪತ್ತನಂತಿಟ್ಟ: ಇಳಂತೂರಿನಲ್ಲಿ ನಡೆದ ಅಭಿಚಾರ ಹತ್ಯೆಗೆ ಸಂಬಂಧಿಸಿದ ಮಾಹಿತಿ ಹೊರಬೀಳುತ್ತಿದ್ದಂತೆಯೇ ಸ್ಥಳೀಯರು ಬೇರೆ ಬೇರೆ ಸಂಗತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ.
ಲೈಲಾ ಒಮ್ಮೆ ಸ್ಥಳೀಯ ಮಹಿಳೆ ಸುಮಾಳನ್ನು ತನ್ನ ಮನೆಯಲ್ಲಿ ಆಹಾರ ಸೇವಿಸಲು ಆಹ್ವಾನಿಸಿದ್ದಳು. ಆದರೆ ವಿಚಿತ್ರವಾಗಿ ಕಂಡುಬಂದಿದ್ದರಿಂದ ನಿರಾಕರಿಸಿದಳು ಎಂದು ಸುಮಾ ಹೇಳಿರುವರು. ಘಟನೆ ನಡೆದ ಎರಡು ವಾರಗಳ ನಂತರ ಪದ್ಮಾ ಸಾವನ್ನಪ್ಪುತ್ತಾಳೆ. ಇದೀಗ ಜುಮಾ ಕ್ರಿಮಿನಲ್ ಗಳ ಕಪಿಮುಷ್ಠಿಯಿಂದ ಪಾರಾಗಿ ನಿರಾಳರಾಗಿದ್ದಾರೆ.
ಎಡಪನ್ ಚಾರು ಎಂಬಲ್ಲಿ ವಾಸವಾಗಿರುವ ಅಡೂರು ಮಹಾತ್ಮಾ ಜನಸೇವನ ಕೇಂದ್ರದಲ್ಲಿ ಕಲೆಕ್ಷನ್ ಏಜೆಂಟ್ (ಸಂಗ್ರಾಹಕಿ) ಕೆಲಸ ನಿರ್ವಹಿಸುವ ಎಸ್. ಸುಮಾ. ಸೆಪ್ಟೆಂಬರ್ 10 ರಂದು ಭಗವಾಲ್ ಸಿಂಗ್ ಅವರ ಮನೆ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಮಧ್ಯಾಹ್ನವಾಗಿತ್ತು ಮತ್ತು ರಸ್ತೆಯಲ್ಲಿ ಯಾರೂ ಇರಲಿಲ್ಲ. ಭಗವಾಲ್ ಸಿಂಗ್ ಅವರ ಮನೆಯ ಮುಂದೆ ವನ-ಆರಾಧನಾಲಯದಂತಹ ವ್ಯವಸ್ಥೆ ಗಮನಿಸಿದ್ದು, ಲೈಲಾ ನಿಂತಿದ್ದು ಕರೆದು ಆಹ್ವಾನಿಸಿದ್ದರು.
ಆಹಾರ ಸೇವಿಸುತ್ತೀರಾ ಎಂದು ಲೈಲಾ ಕೇಳಿದ್ದಳು. ಬೇಡ ಎಂದು ಮನೆಗೆ ಹೋಗಿ ಊಟ ಮಾಡಬೇಕು ಎಂದಿದ್ದಕ್ಕೆ, ನಮ್ಮಲ್ಲಿ ಊಟ ಮಾಡಿ ಎಂದು ಲೈಲಾ ಒತ್ತಾಯಿಸಿದ್ದಳು. ಸುಮಾ ಇಲ್ಲ ಎಂದು ನಿರಾಕರಿಸಿದರು. ಆದರೆ ಲೈಲಾ ಮತ್ತೆ ಒತ್ತಾಯಿಸಿದರು. ಮನೆಗೆ ಹೋಗಿ ಸ್ವಲ್ಪ ನೀರಾದರೂ ಕುಡಿಯೋಣ ಎಂದು ಮನೆಯಂಗಳಕ್ಕೆ ತೆರಳಿದ್ದಳು. ಆದರೆ ಅಪರಿಚಿತ ಅಸಾಮಾನ್ಯ ವರ್ತನೆಯನ್ನು ಕಂಡು ಸುಮಾ ಆಘಾತಕ್ಕೊಳಗಾದರು. ಇದರೊಂದಿಗೆ ಅವರು ಆದಷ್ಟು ಬೇಗ ಅಲ್ಲಿಂದ ಹೊರಡಲು ನಿರ್ಧರಿಸಿದರು ಎಂದು ನೆನಪಿಸಿರುವರು. ಸುಮಾ ಅವರು ಬಳಿಕ ಸಾರ್ವಜನಿಕ ಸೇವಾ ಕೇಂದ್ರಕ್ಕೆ 60 ರೂಪಾಯಿ ದೇಣಿಗೆ ಸ್ವೀಕರಿಸಿ ತೆರಳಿದರು.
ಅವರು ಮಾತನಾಡುತ್ತಿರುವಾಗ ಭಗವಲ್ ಸಿಂಗ್ ಬಂದು ಇಣುಕಿ ನೋಡಿದರು ಎಂದೂ ಸುಮಾ ಹೇಳುತ್ತಾರೆ. ಶಫಿಯ ಸೂಚನೆಗಳನ್ನು ಅನುಸರಿಸಿ ಬಲಿನೀಡಲು ಮುಂದಿನ ಮಹಿಳೆಯನ್ನು ಅವರು ಹುಡುಕುತ್ತಿದ್ದಿರಬೇಕು ಎಂದು ಸುಮಾ ಈಗಲೂ ನೆನಪಿಸಿ ಭಯಭೀತರಾಗುತ್ತಾರೆ. ಸುಮಾಳ ಈ ಅನುಭವ- ಭೇಟಿಯ ಎರಡು ವಾರಗಳ ನಂತರ ಪದ್ಮಾ ಕೊಲ್ಲಲ್ಪಟ್ಟರು.
ಲೈಲಾ ಆಹಾರ ಸೇವಿಸಲು ಒತ್ತಾಯಿಸಿದ್ದಳು: ಬೆನ್ನಲ್ಲೇ ಪದ್ಮಾ ಕೊಲೆ: ಹತ್ಯೆಯ ಸುದ್ದಿ ಕೇಳಿ ಆಘಾತಕ್ಕೊಳಗಾದ ಸುಮಾ
0
ಅಕ್ಟೋಬರ್ 14, 2022
Tags