ಸ್ನಾನ ಮಾಡಿದರೆ ಮೈಗೆ ಒಂದು ರೀತಿಯ ತಾಜಾತನ. ಸ್ನಾನ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನಾ ಸ್ನಾನ ಮಾಡುವವರಿಗೆ ಒಂದು ದಿನ ಸ್ನಾನ ಮಾಡದಿದ್ದರೆ ಏನೋ ಒಂದು ರೀತಿಯ ಕಿರಿಕಿರಿ. ಇನ್ನು ದಿನಾ ಸ್ನಾನ ಮಾಡಿದರೆ ನಮ್ಮ ಮೈ ದುರ್ವಾಸನೆ ಬೀರುವುದು ಕಡಿಮೆಯಾಗುತ್ತೆ, ಸ್ನಾನ ಮಾಡದಿದ್ದರೆ ಮೈ ದುರ್ವಾಸನೆಯಿಂದಾಗಿ ಜನರು ನಮ್ಮ ಬಳಿ ಕೂರಲು ಅಥವಾ ನಮ್ಮನ್ನು ಮಾತನಾಡಿಸಲು ಹಿಂಜರಿಯಬಹುದು. ಹಾಗಾಗಿ ನಾವು ದಿನಾ ಸ್ನಾನ ಮಾಡಬೇಕು, ಆದರೆ ಕೆಲವರು ಶುಚಿತ್ವದ ಕಡೆ ತುಂಬಾನೇ ಗಮನ ನೀಡುತ್ತಾರೆ, ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿದರೆ ಒಕೆ ಆದರೆ ಅದಕ್ಕಿಂತ ಹೆಚ್ಚಿನ ಬಾರಿ ಸ್ನಾನ ಮಾಡುತ್ತಾರೆ, ಇದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ತ್ವಚೆಯ ಆರೋಗ್ಯದ ದೃಷ್ಟಿಯಿಂದ ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ:
ಆಗಾಗ ಸ್ನಾನ ಮಾಡುವುದು
ತುಂಬಾ ಬಾರಿ ಸ್ನಾನ ಮಾಡಿದರೆ ತ್ವಚೆ ಹಾಗೂ ಕೂದಲಿಗೆ ಒಳ್ಳೆಯದಲ್ಲ. ತ್ವಚೆ ಆರೋಗ್ಯಕರ
ಬ್ಯಾಕ್ಟಿರಿಯಾ ಉತ್ಪತ್ತಿ ಮಾಡುತ್ತೆ, ಇದು ತ್ವಚೆ ಹಾಗೂ ಕೂದಲಿನ ಮಾಯಿಶ್ಚರೈಸರ್
ಕಾಪಾಡಲು ಸಹಕಾರಿ. ಆಗಾಗ ಮೈಗೆ ಸೋಪು ಹಚ್ಚಿ ತಿಕ್ಕುತ್ತಿದ್ದರೆ ತ್ವಚೆ ಒಣಗಿ
ತುರಿಕೆಸಮಸ್ಯೆ ಉಂಟಾಗುವುದು. ಅಲ್ಲದೆ ಕೆಟ್ಟ ಬ್ಯಾಕ್ಟರಿಯಾ ದೇಹದೊಳಗೆ ಪ್ರವೇಶಿಸಿ
ತ್ವಚೆಗೆ ಹಾಗೂ ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡುತ್ತದೆ. ಅದೇ ಒಳ್ಳೆಯ ಬ್ಯಾಕ್ಟಿರಿಯಾ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.
ತಪ್ಪಾದ ಸೋಪು ಆಯ್ಕೆ ಮಾಡಬೇಡಿ
ನೀವು ಆ್ಯಂಟಿಬ್ಯಾಕ್ಟಿರಿಯಾ ಸೋಪು ಹೆಚ್ಚಾಗಿ ಬಳಸಿದರೆ ತ್ವಚೆಯಲ್ಲಿ ಒಳ್ಳೆಯ
ಬ್ಯಾಕ್ಟಿರಿಯಾ ಕೂಡ ನಾಶ ಮಾಡುತ್ತೆ. ಆದ್ದರಿಂದ ನಿಮ್ಮ ಸೋಪು ತುಂಬಾನೇ ಸುವಾಸನೆ
ಬೀರುತ್ತಿದ್ದರೆ ಅದು ತ್ವಚೆಗೆ ಒಳ್ಳೆಯದಲ್ಲ. ಮೈಲ್ಡ್ ಸೋಪು ಬಳಸಿ ನಂತರ ಮಾಯಿಶ್ಚರೈಸರ್
ಹಚ್ಚಿ.
ಪ್ರತಿದಿನ ಟವಲ್ ತೊಳೆಯಿರಿ
ಪ್ರತಿದಿನ ಸ್ನಾನ ಮಾಡಿದ ಮೇಲೆ ಶುಚಿಯಾದ ಟವಲ್ ಬಳಸಬೇಕು ಅಲ್ಲದೆ ನೀವು ಟವಲ್ ಅನ್ನು ಒದ್ದೆಯಾಗಿ ಹುಕ್‌ಗೆ ಹಾಕುವ ಬದಲು ಟವಲ್ ಅನ್ನು ಹರಡಿ ಒಣಗಿಸಿ.
ತಲೆಯನ್ನು ಆಗಾಗ ತೊಳೆಯಬೇಡಿ
ತಲೆಯನ್ನು ಆಗಾಗ ತೊಳೆಯುವುದು ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ತಲೆ
ಕೂದಲನ್ನು ವಾರಕ್ಕೆ 2-3 ಬಾರಿ ಮಾತ್ರ ತೊಳೆಯಿರಿ. ಇನ್ನು ದೂಳಿನಲ್ಲಿ ಓಡಾಡುವಾಗ ತಲೆಗೆ
ಸ್ಕಾರ್ಪ್ ಬಳಸಿ. ನಿಮ್ಮ ತಲೆ ಬುಡದಲ್ಲಿ ನೈಸರ್ಗಿಕವಾದ ಎಣ್ಣೆಯಂಶ
ಉತ್ಪತ್ತಿಯಾಗುವುದು ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಬಿಸಿ ನೀರು ಬಳಸಬೇಡಿ
ಚಳಿಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ಬಿಸಿ ಬಿಸಿ ನೀರು ಮೈಗೆ ಹಾಕಿದರೆ ತುಂಬಾ ಹಿತ
ಅನಿಸುವುದು ಆದರೆ ತುಂಬಾ ಬಿಸಿ ನೀರು ತ್ವಚೆಗೆ ಆರೋಗ್ಯಕರವಲ್ಲ. ಉಗುರುಬೆಚ್ಚಗಿನ ನೀರು
ಸ್ನಾನಕ್ಕೆ ಒಳ್ಳೆಯದು.