ಕುಂಬಳೆ: ಕಾವೇರಿ ಸಂಕ್ರಮಣದ ಹಿನ್ನೆಲೆಯಲ್ಲಿ ಕುಂಬಳೆ ಸಮೀಪದ ನಾಯ್ಕಾಪು ಬಳಿಯ ಇತಿಹಾಸ ಪ್ರಸಿದ್ದ ಮುಜುಂಗಾವು ಶ್ರೀಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲಿ ಸೋಮವಾರ ಪವಿತ್ರ ಕಾವೇರಿ ತೀರ್ಥಸ್ನಾನ ಸಹಸ್ರಾರು ಜನರ ಭಾಗವಹಿಸುವಿಕೆಯೊಂದಿಗೆ ಸಂಪನ್ನಗೊಂಡಿತು.
ಕಾವೇರಿ ಉಗಮಸ್ಥಾನವಾದ ತಲಕಾವೇರಿಗೆ ಸಂವಾದಿಯಾಗಿ ಮುಜುಂಗಾವು ಶ್ರೀಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲೂ ಸಹಸ್ರಾರು ಜನರು ತೀರ್ಥಸ್ನಾನ ಮಾಡುವುದು ತಲತಲಾಂತರದಿಂದ ಬಂದಿರುವ ನಂಬಿಕೆಯಾಗಿದೆ. ಸಂಕ್ರಮಣದ ಪ್ರಯುಕ್ತ ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದ ಎದುಭಾಗದಲ್ಲಿರುವ ಬೃಹತ್ ಪವಿತ್ರ ತೀರ್ಥ ಕೆರೆಯಲ್ಲಿ ವಾಡಿಕೆಯಂತೆ ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ತೀರ್ಥಸ್ನಾನ ಮಾಡಿದರು. ಮುಂಜಾನೆ ಸೂರ್ಯೋದಯಕ್ಕೂ ಮೊದಲು ಶ್ರೀಕ್ಷೇತ್ರದ ಅರ್ಚಕ ನಂದಕಿಶೋರ ಅವರು ಬೆಳ್ಳಿಯ ಕಲಶದಲ್ಲಿ ಕೆರೆಯಿಂದ ತೀರ್ಥವನ್ನು ವಾದ್ಯಘೋಷಗಳ ಮೆರವಣಿಗೆಯಲ್ಲಿ ತಂದು ಶ್ರೀದೇವರಿಗೆ ಅಭಿμÉೀಕ ಮಾಡುವುದರೊಂದಿಗೆ ತೀರ್ಥಸ್ನಾನ ಆರಂಭಗೊಂಡಿತು. ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿ, ಮಾಯಿಪ್ಪಾಡಿ ಅರಸರಾದ ದಾನಮಾರ್ತಾಂಡವರ್ಮ ರಾಜೇಂದ್ರ ರಾಜರು, ಕ್ಷೇತ್ರ ನಿರ್ವಹಣಾಧಿಕಾರಿ ಎ.ಪಿ. ಜನಾರ್ದನ ಮೊದಲಾದವರು ನೇತೃತ್ವ ವಹಿಸಿದ್ದರು.
ಇಲ್ಲಿಯ ಸರೋವರದ ನೀರು ಸಲಿಲ ಕಾವೇರಿ ತೀರ್ಥಕ್ಕೆ ಸಮವೆಂದೂ, ಬೆಳ್ತಿಗೆ ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಕೊಳದಲ್ಲಿ ಸ್ನಾನ ಮಾಡುವುದರಿಂದ ಹಲವು ರೀತಿಯ ಚರ್ಮರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹಿಂದೆ ಕೇವಲ ಸೀಮೆಯ ಜನರಿಗμÉ್ಟೀ ಇದರ ವಿಶಿಷ್ಟತೆ ತಿಳಿದಿತ್ತು. ಇತ್ತೀಚೆಗೆ ಸ್ಥಳೀಯ ಹಾಗೂ ಹೊರಗಿನಿಂದ ಜಾತಿ ಬೇಧ ಮರೆತು ಪವಿತ್ರ ಸ್ನಾನದಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಸೋಮವಾರ ನಡೆದ ರ್ತೀಸ್ನಾನದಲ್ಲಿ ಸುಮಾರು 40 ಸಾವಿರಕ್ಕೂ ಮಿಕ್ಕಿದ ಜನರು ಪಾಲ್ಗೊಂಡಿದ್ದರು.
ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಕೊಳಕ್ಕೆ ಪ್ರದಕ್ಷಿಣೆ ಬಂದು ಉಳಿದ ಸ್ವಲ್ವ ಹುರುಳಿ ಮತ್ತು ಅಕ್ಕಿಯ ಮಿಶ್ರಣವನ್ನು ಶ್ರೀ ಕ್ಷೇತ್ರದ ಗೋಪುರದಲ್ಲಿ ಇಡಲಾಗಿರುವ ಕೊಪ್ಪರಿಗೆಗೆ ಹಾಕಿ ದೇವರಿಗೆ ಮುಳ್ಳು ಸೌತೆ ಮತ್ತು ಹಣ್ಣು ಕಾಯಿಗಳನ್ನು ಸಮರ್ಪಿಸಿ ತೀರ್ಥಪ್ರಸಾದ ವಿತಸುವುದರೊಂದಿಗೆ ಹರಕೆ ಸಂದಾಯವಾಗುತ್ತದೆ.
ತೀರ್ಥಸ್ನಾನದಲ್ಲಿ ಸಂಜೆಯ ತನಕವೂ ಭಕ್ತರು ಭಾಗವಹಿಸಿದ್ದರು. ಶ್ರೀ ಕ್ಷೇತ್ರದಲ್ಲಿ ನಡೆಯುವ ತುಲಾಸಂಕ್ರಮಣ ತೀರ್ಥ ಸ್ನಾನದ ಅಂಗವಾಗಿ ಕುಂಬಳೆ-ಮುಳ್ಳೇರಿಯಾ ರಸ್ತೆಯಾಗಿ ಸಂಚರಿಸುವ ಹಾಗೂ ಕುಂಬಳೆ-ಪೆರ್ಲ ಸಂಚರಿಸುವ ಖಾಸಗಿ ಬಸ್‍ಗಳು ಶ್ರೀ ಕ್ಷೇತ್ರದ ಮುಂಭಾಗವಾಗಿ ಸಂಚಾರ ನಡೆಸಿ ಭಕ್ತರ ಸಂಚಾರಕ್ಕೆ ನೆರವಾದವು.