ಕಾಸರಗೋಡು: ಮಕ್ಕಳಲ್ಲಿನ ಸುಪ್ತ ಪ್ರತಿ¨ಭೆಗಳ ಅನಾವರಣಕ್ಕೆ ಶಾಲಾ ಕಲೋತ್ಸವ ಹೆಚ್ಚು ಸಹಕಾರಿ ಎಂಬುದಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಪ್ರಬಂಧಕ ಪಿ.ವಿ.ಎಸ್ ಮಿತ್ರ ತಿಳಿಸಿದ್ದಾರೆ.
ಅವರು ಶಾಲೆಯ ಕಲಾ ನಿಲಯ ಸಭಾಂಗಣದಲ್ಲಿ ನಡೆದ ಎರಡು ದಿವಸಗಳ ಶಾಲಾ ಮಟ್ಟದ ಕಲೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮುಖ್ಯ ಶೀಕ್ಷಕ ರಾಜೇಂದ್ರ ಬಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಶಾಲಾ ಕಲೋತ್ಸವಗಳು ಅನನ್ಯ ಅವಕಾಶ ತೆರೆದಿಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಬೇಕು ಎಂದು ತಿಳಿಸಿದರು.
ಸ್ಟಾಫ್ ಕಾರ್ಯದರ್ಶಿ ಕೇಶವಪ್ರಕಾಶ್ ಎನ್ ಉಪಸ್ಥಿತರಿದ್ದರು. ಕಲೋತ್ಸವದ ಸಂಚಾಲಕ ಉಮೇಶ್ ಕೆ. ಪೆರ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಉದಯಶಂಕರ ಎ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಕಲಾ ಸ್ಪರ್ಧೆಗಳು ಜರುಗಿತು.