ತೆಂಗಿನ ಕಾಯಿ ಸುಲಿಯುವ ಪ್ರತಿಯೊಬ್ಬರಿಗೂ ಆಗೀಗ ಮೊಳಕೆಬಂದ ತೆಂಗು ಸಿಕ್ಕಿಯೇ ಇರುತ್ತದೆ. ಇಂದಿನ ನಗರವಾಸಿಗಳಿಗೆ ಅಷ್ಟೊಂದು ಪರಿಚಿತವಲ್ಲದಿದ್ದರೂ ಅಂಗಡಿಯಿಂದ ಖರೀದಿಸುವವರಿಗೆ ಕೆಲವೊಮ್ಮೆ ಇಂತಹ ತೆಂಗುಗಳು ಮುಗ್ಗುಮುರಿದು ಸಿಕ್ಕಿಯೇ ಸಿಕ್ಕಿರುತ್ತದೆ. ಅಂತಹ ತೆಂಗಿನ ಕಾಯಿ ಒಡೆದ ಬಳಿಕ ಒಳಗಿನ ಹೂ ಅಥವಾ ಮೊಳಕೆ ತಿರುಳು ಬೀಜಗಳಂತಿದ್ದು ಏನು ಮಾಡಬಹುದೆಂದು ಹಲವರಿಗೆ ತಿಳಿದಿರಲಿಕ್ಕಿಲ್ಲ.
ತೆಂಗಿನ ಇಂತಹ ಮೊಳಕೆ ಹೂವನ್ನು ಬಿಸಾಡುವ ಬದಲು ಬಳಸಿದರೆ ವಿಟಮಿನ್ ಗಳ ಉಗ್ರಾಣ ಸಿಗುತ್ತದೆ.
ಇದು ವಿಟಮಿನ್ ಬಿ 1, ಬಿ 3, ಬಿ 5, ಬಿ 6 ಮತ್ತು ಸೆಲೆನಿಯಮ್, ಮೆಗ್ನೀಸಿಯಮ್, ರಂಜಕ, ಪೆÇಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೊಂದಿರುತ್ತದೆ. ಇವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸಲು ಈ ಮೊಳಕೆ ಹೂ ಅತ್ಯುತ್ತ್ತಮವಾಗಿದೆ.
ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್ ಆಗಿ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನೂ ಹೊಂದಿದೆ. ಪ್ರತಿದಿನ ಸ್ವಲ್ಪ ಪ್ರಮಾಣದ ಈ ಹೂವನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ. ದೇಹಕ್ಕೆ ಶಕ್ತಿ ನೀಡುವಲ್ಲಿಯೂ ಈ ಹೂ ಮುಂಚೂಣಿಯಲ್ಲಿದೆ.
ಚರ್ಮದ ಸುಕ್ಕುಗಳನ್ನು ಹೋಗಲಾಡಿಸುತ್ತದೆ. ವಯಸ್ಸಾಗುವುದನ್ನು ತಡೆಯುತ್ತದೆ. ಆರೋಗ್ಯಕರ ಕೂದಲನ್ನು ಉತ್ತೇಜಿಸಲು ಮತ್ತು ಜೀವನಶೈಲಿ ರೋಗಗಳಿಂದ ರಕ್ಷಿಸಲು ಉತ್ತಮವಾಗಿದೆ.
ತೆಂಗಿನ ಮೊಳಕೆ ಹೂ ಎಸೆಯಬೇಡಿ: ವಿಟಮಿನ್ ನ ಉಗ್ರಾಣ; ಆರೋಗ್ಯದ ರಕ್ಷಕ
0
ಅಕ್ಟೋಬರ್ 03, 2022
Tags