HEALTH TIPS

ಕುಲಪತಿಗಳ ರಾಜೀನಾಮೆ ಕೇಳುವ ಅಧಿಕಾರ ರಾಜ್ಯಪಾಲರಿಗಿಲ್ಲ

 

             ಪಾಲಕ್ಕಾಡ್ : ಕೇರಳದ 9 ವಿಶ್ವವಿದ್ಯಾಲಯಗಳ ಕುಲಪತಿಗಳ ರಾಜೀನಾಮೆ ಕೇಳಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರಿಗೆ ಅಂತಹ ಯಾವುದೇ ಅಧಿಕಾರವಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

              ರಾಜ್ಯಪಾಲರ ನಡೆ ಪ್ರಜಾಸತ್ತಾತ್ಮಕ ಚುನಾಯಿತ ಸರ್ಕಾರದ ಅಧಿಕಾರ ಮತ್ತು ಶೈಕ್ಷಣಿಕವಾಗಿ ಸ್ವತಂತ್ರವಾಗಿರಬೇಕಾದ ವಿಶ್ವವಿದ್ಯಾಲಯಗಳ ಮೇಲಿನ ಅತಿಕ್ರಮಣವಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳನ್ನು ನಾಶ ಮಾಡುವ ಉದ್ದೇಶದಿಂದ 'ಯುದ್ಧ' ನಡೆಸುತ್ತಿದ್ದಾರೆ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಕಿಡಿಕಾರಿದರು.

               ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಕ ಮಾಡಿದ್ದು ರಾಜ್ಯಪಾಲರು. ಈ ನೇಮಕಾತಿ ಕಾನೂನುಬಾಹಿರವಾಗಿ ಮಾಡಿದ್ದರೆ ಅದರ ಹೊಣೆಗಾರಿಕೆ ರಾಜ್ಯಪಾಲರ ಮೇಲಿದೆ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಕಾನೂನು ಮತ್ತು ನ್ಯಾಯದ ಮೂಲ ತತ್ವ ಮರೆತಿದ್ದಾರೆ. ಅಸ್ತಿತ್ವದಲ್ಲಿ ಇಲ್ಲದ ಅಧಿಕಾರ ಚಲಾಯಿಸಲು ಕುಲಾಧಿಪತಿ ಸ್ಥಾನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಜಯನ್ ಹೇಳಿದರು.

              ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಜ್ಯಪಾಲರು ಇತರೆ ವಿಶ್ವವಿದ್ಯಾಲಯಗಳ ಕುಲಪತಿಗಳ ರಾಜೀನಾಮೆ ಕೇಳಲು ಸಾಧ್ಯವಿಲ್ಲ. ಏಕೆಂದರೆ ಆ ಆದೇಶ ನಿರ್ದಿಷ್ಟ ಪ್ರಕರಣದಲ್ಲಿ ಕುಲಪತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದರು. ‌

              ಅಬ್ದುಲ್‌ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಮೇಲಿನ ಸುಪ್ರೀಂ ಕೋರ್ಟ್ ಆದೇಶವು ಕಾರ್ಯವಿಧಾನದ ವಿಷಯ ಆಧರಿಸಿದೆ ಮತ್ತು ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಏನನ್ನೂ ಹೇಳಿಲ್ಲ. ಅದರಲ್ಲಿಯೂ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಈ ಹಸ್ತಕ್ಷೇಪ ಸಹಜ ನ್ಯಾಯದ ಉಲ್ಲಂಘನೆಯಾಗಿದೆ ಎಂದರು.

         ವಿಶ್ವವಿದ್ಯಾಲಯ ಕಾಯ್ದೆಯಲ್ಲಿ ಕುಲಪತಿ ವಜಾಗೊಳಿಸಲು ಕುಲಾಧಿಪತಿಗೆ ಅಧಿಕಾರ ನೀಡುವ ಅವಕಾಶವಿಲ್ಲ. ವಿ.ವಿಯ ಯಾವುದೇ ನಿಧಿ ದುರ್ಬಳಕೆ ಅಥವಾ ನೈತಿಕ ಪತನ ಆಧಾರದ ಮೇಲೆ ವಿ.ಸಿ ಅನ್ನು ತೆಗೆದುಹಾಕಬಹುದು. ಆಗಲೂ, ಅಂತಹ ಆರೋಪಗಳನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಬೇಕು. ಅದು ಸಾಬೀತಾದರೆ ಮಾತ್ರ ತೆಗೆದು ಹಾಕಬಹುದು ಎಂದು ಅವರು ಹೇಳಿದರು.

              ಯುಜಿಸಿ ನಿಯಮಗಳನ್ನು ಪಾಲಿಸದೆ ನೇಮಕಗೊಳಿಸಿರುವ ಕಾರಣ ತಿರುವನಂತಪುರದ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯ ನೇಮಕಾತಿ ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಈಚೆಗೆ ಆದೇಶ ನೀಡಿತ್ತು. ಈ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯಪಾಲರು, ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ 9 ವಿ.ವಿ ಕುಲಪತಿಗಳಿಗೆ ಸೋಮವಾರ ಬೆಳಿಗ್ಗೆ 11.30ರೊಳಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries