ಲಂಡನ್: ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ಅವರ ಆಡಳಿತದ ಬಗ್ಗೆ ಅವರ ಕನ್ಸರ್ವೇಟಿವ್ ಪಕ್ಷದಲ್ಲಿ ಮತ್ತು ವಿತ್ತೀಯ ಮಾರುಕಟ್ಟೆಯಲ್ಲಿ ಅಸಮಾಧಾನದ ಅಲೆಗಳು ಎದ್ದಿದ್ದು, ಅಧಿಕಾರದ ಗದ್ದುಗೆ ಮಾಜಿ ವಿತ್ತ ಸಚಿವ, ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರಿಗೆ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ.
ಕಳೆದ ವಾರವಿಡೀ ಬ್ರಿಟನ್‌ನ ರಾಜಕೀಯ ಗೊಂದಲಮಯವಾಗಿತ್ತು. ವಿತ್ತ ಸಚಿವೆ ಕ್ವಾಸಿ ಕ್ವಾರ್ಟೆಂಗ್ ತನ್ನದೇ ಆರ್ಥಿಕ ನೀತಿಗಳನ್ನು ಹೇರಿದ್ದರಿಂದ ಅಸಮಾಧಾನಗೊಂಡ ಪ್ರಧಾನಿ ಟ್ರಸ್ ಅವರನ್ನು ಕಿತ್ತೂಗೆದಿದ್ದರು. ಲಿಜ್ ಟ್ರಸ್ ಅವರ ತೆರಿಗೆ ಕಡಿತ ನೀತಿಯಿಂದ ಆರ್ಥಿಕತೆಗೆ ಹೊರೆ ಉಂಟಾಗಲಿದೆ ಎಂದು ಈ ಹಿಂದೆ ರಿಷಿ ನೀಡಿದ್ದ ಎಚ್ಚರಿಕೆ ಸರಿಯಾಗಿದೆ ಎಂಬುದಾಗಿ ಕನ್ಸರ್ವೇಟಿವ್ ಪಕ್ಷದ ಬಹುಮಂದಿ ಸಂಸದರು ಹೇಳಿದ್ದಾರೆ.
ಇದರ ಬೆನ್ನಲ್ಲೇ ರಿಷಿ ಪ್ರಧಾನಿ ಆಗಬೇಕು ಎಂಬ ಅಭಿಪ್ರಾಯ ಬಲವಾಗತೊಡಗಿದೆ. ಇದಾದರೆ ಬ್ರಿಟಿಶ್ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಗಮನಾರ್ಹ ಪುನರಾಗಮನ ಇದಾಗಲಿದೆ.