ಪೆರ್ಲ: ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಜರಗಿತು. ಈ ಸಂದರ್ಬದಲ್ಲಿ ನಿವೃತ್ತ ಶಿಕ್ಷಕ ಗೋವಿಂದನ ಜೋಯಿಷರನ್ನು ಗೌರವಿಸಲಾಯಿತು. ಸಭೆಯಲ್ಲಿ ಬದಿಯಡ್ಕ ಪೋಲಿಸ್ ಅಧಿಕಾರಿಗಳಾದ ಜಯಪ್ರಕಾಶ್ ಹಾಗೂ ಸತೀಶ್, ಶಾಲಾ ಆಡಳಿತಮಂಡಳಿ ಉಪಾದ್ಯಕ್ಷ ಸದಾಶಿವ ಭಟ್, ಮುಖ್ಯೋಪಾಧ್ಯಾಯ ರಾಜೇಂದ್ರ ಬಿ, ಶಾಲಾ ಪಿ ಟಿ ಎ ಸದಸ್ಯ ವೆಂಟ್ರಮಣ ಆಚಾರ್ ಉಪಸ್ಥಿತರಿದ್ದು ನಿವೃತ್ತ ಶಿಕ್ಷಕÀ ಗೋವಿಂದ ಜೋಷಿಯವರನ್ನು ಗೌರವಿಸಿದರು.
ಗೌರವ ಸ್ವೀಕರಿಸಿದ ನಿವೃತ್ತ ಶಿಕ್ಷಕರ ಬಗ್ಗೆ ಸನ್ಮಾನ ಪತ್ರವನ್ನು ಹಿರಿಯ ಅಧ್ಯಾಪಕÀ ಸತೀಶ್ ಕುಮಾರ್ ಪಿ ಯಸ್ ವಾಚಿಸಿದರು. ಗೌರವ ಸ್ವೀಕರಿಸಿದ ಗೋವಿಂದ ಜೋಯಿಷರು ಮಾತನಾಡಿದರು. ಆಡಳಿತ ಮಂಡಳಿ ಉಪಾದ್ಯಕ್ಷ ಸದಾಶಿವ ಭಟ್ ಶುಭ ಹಾರೈಸಿದರು, ಪೋಲೀಸ್ ಅಧಿಕಾರಿ ಜಯಪ್ರಕಾಶ್ ಅವರು ಗುರು ನಮನ ಸಲ್ಲಿಸಿ ಬಳಿಕ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ತೊಂದರೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ , ಜಾಗೃತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಲಾ ಮುಖ್ಯೋಪಾಧ್ಯಾಯ ರಾದ ರಾಜೇಂದ್ರ ಬಿ ಮಾತನಾಡಿದರು. ಹಿರಿಯ ಅಧ್ಯಾಪಕ ಕೇಶವ ಪ್ರಕಾಶ್ ಯನ್ ಸ್ವಾಗತಿಸಿ, ವೇಣುಗೋಪಾಲ ಯಸ್ ವಂದಿಸಿದರು. ಅದ್ಯಾಪಕರಾದ ಕೃಷ್ಣಪ್ರಸಾದ ಬನಾರಿ ನಿರೂಪಿಸಿದರು.
ಪೆರ್ಲದಲ್ಲಿ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆ
0
ಅಕ್ಟೋಬರ್ 09, 2022