ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿದ್ಯಾದಶಮಿಯಂದು ಶ್ರೀ ಶಾರದಾ ಪೂಜೆ ನಡೆಯಿತು. ವೇದಮೂರ್ತಿ ಗುಣಾಜೆ ಈಶ್ವರ ಭಟ್ ವೈದಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಜೊತೆಗೂಡಿ ಸುಶ್ರಾವ್ಯವಾಗಿ ಭಜನೆ ಹಾಡಿದರು. ಪುಟ್ಟ ಮಕ್ಕಳಿಗೆ ವಿದ್ಯಾರಂಭ, ಶಾರದಾ ಪೂಜೆಯ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಪ್ರಸಾದದೊಂದಿಗೆ ಪುಸ್ತಕವನ್ನೂ ಪಡೆದುಕೊಂಡ ವಿದ್ಯಾರ್ಥಿಗಳು ಪುಸ್ತಕ ಪಠಣ ನಡೆಸಿದರು. ಶಾಲಾ ಆಡಳಿತಮಂಡಳಿ ಪದಾಧಿಕಾರಿಗಳು, ಸದಸ್ಯರು, ವಿದ್ಯಾಭಿಮಾನಿಗಳು, ರಕ್ಷಕ ಶಿಕ್ಷ ಸಂಘದ ಪದಾಕಾರಿಗಳು ಪಾಲ್ಗೊಂಡಿದ್ದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶಾರದಾ ಪೂಜೆ, ವಿದ್ಯಾರಂಭ
0
ಅಕ್ಟೋಬರ್ 08, 2022