ಕಾಸರಗೋಡು: ಅಖಿಲ ಕೇರಳ ಯಾದವ ಸಭಾ ಪಳ್ಳಿಕೆರೆ ಪಂಚಾಯಿತಿ ಸಮಿತಿಯ ಕುಟುಂಬ ಸಂಗಮ ಅರವತ್ ಪೂಂಬನಂಕುಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾಸರಗೋಡು ಡಿ.ವೈ.ಎಸ್.ಪಿ. ಡಾ.ವಿ.ಬಾಲಕೃಷ್ಣನ್ ಉದ್ಘಾಟಿಸಿದರು.
ಪಳ್ಳಿಕ್ಕರ ಪಂಚಾಯಿತಿ ಸಮಿತಿ ಅಧ್ಯಕ್ಷ ಎ.ಗಂಗಾಧರನ್ ಅಧ್ಯಕ್ಷತೆ ವಹಿಸಿದ್ದರು. ಯಾದವ ಸಭಾದ ರಾಜ್ಯ-ಜಿಲ್ಲೆ-ತಾಲೂಕು ಪದಾಧಿಕಾರಿಗಳನ್ನು ಪೂಂಬನಕುಯಿ ದೇವಸ್ಥಾನದ ಅಧಿಕಾರಿ ವಿ.ಕೃಷ್ಣನ್ ಮುತ್ಯಾರ್ ಸನ್ಮಾನಿಸಿದರು. ಪೂರಕಳಿಗೆ ರಾಜ್ಯ ಪ್ರಶಸ್ತಿ ಪಡೆದ ಪಿ.ಪಿ.ದಾಮೋದರ ಪಣಿಕ್ಕರ್ ಅವರನ್ನು ಯಾದವ ಸಭಾದ ರಾಜ್ಯಾಧ್ಯಕ್ಷ ಕೆ.ಶಿವರಾಮನ್ ಮೇಸ್ತ್ರಿ ಸನ್ಮಾನಿಸಿದರು.
10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬೇಕಲ್ ಡಿವೈಎಸ್‍ಪಿ ಸಿ ಕೆ ಸುನೀಲಕುಮಾರ್ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನಡೆಸಿದರು. ವಕೀಲರಾದ ಪಯ್ಯನ್ನೂರು ಶಾಜಿ, ರಮೇಶ್ ಯಾದವ್, ಕೆ.ಎಂ.ದಾಮೋದರನ್, ಮಾಜಿ ಡಿವೈಎಸ್ಪಿ ಕೆ. ದಾಮೋದರನ್, ಎ.ಮಣಿಕಂಠನ್, ಜಯಶ್ರೀಮಾಧವನ್, ಸೂರಜ್ ಕೂಟಕಣಿ, ರೀಜಾ ರಾಜೇಶ್, ಬಾಬು ಮಣಿಯೂರ್,ಬಿ.ರಾಜೀವ್, ಕಮಲಾಕ್ಷನ್ ಮುನ್ನಾಡ್, ಪಿ.ರಾಘವನ್, ಶಿವಾನಂದನ್ ಮಾಸ್ಟರ್, ಧನಲಕ್ಷ್ಮಿ ಕುಞÂರಾಮನ್, ಯಶೋದಾ ನಾರಾಯಣನ್ ಅಂಬಿಕಾನ್ ಉಪಸ್ಥಿತರಿದ್ದರು. ನಂತರ ಕೇರಳ ಪೆÇಲೀಸರ 'ಮ್ಯಾಜಿಕ್ ಮಿಠಾಯಿ'ಬೀದಿ ನಾಟಕ ನಡೆಯಿತು.
ಯಾದವ ಸಭಾ ಪಳ್ಳಿಕ್ಕೆರೆ ಪಂಚಾಯಿತಿ ಸಮಿತಿ ಕುಟುಂಬ ಸಮ್ಮಿಲನ
0
ಅಕ್ಟೋಬರ್ 17, 2022
Tags