ನವದೆಹಲಿ: ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಎಲ್ಲರಿಗೂ ಕ್ರೇಝ್ ಇದ್ದೇ ಇದೆ. ನಮಗೂ ಹೆಚ್ಚಿನ ಫಾಲೋವರ್ಸ್ ಬೇಕು, ನಮ್ಮ ಪೋಸ್ಟ್ ಹೆಚ್ಚಿನ ಶೇರ್, ಲೈಕ್ಸ್ ಪಡೆಯಬೇಕೆಂಬ ಬಯಕೆ ಇರುತ್ತದೆ. ಜತೆಗೆ ನಮಗೂ ನಮ್ಮ ಪ್ರೊಫೈಲ್ನಲ್ಲಿ ಬ್ಲೂ ಟಿಕ್ (Blue Tick) ಬರಬೇಕೆಂದು ಇರುತ್ತದೆ.
ಸದ್ಯ ಎಲಾನ್ ಮಸ್ಕ್ ಒಡೆತನಕ್ಕೆ ಟ್ವಿಟರ್ ಬರುತ್ತಿದ್ದಂತೆ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರ ಫಲವಾಗಿ ಇನ್ನುಮುಂದೆ ಟ್ವಿಟರ್ನಲ್ಲಿ ಬ್ಲೂ ಟಿಕ್ (Blue Tick) ಬೇಕೆಂದರೆ ಹಣ ಪಾವತಿಸಿ ಚಂದದಾರರಾಗಬೇಕಿದೆ.
ಟ್ವಿಟರ್ನಲ್ಲಿ ಅಧಿಕ ಫಾಲೋವರ್ಸ್ಗಳನ್ನು ಹೊಂದಿದಾಗ ಲಭ್ಯವಾಗುವಂತಹ ಬ್ಲೂ ಟಿಕ್ (Blue Tick) ಬಳಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇನ್ನು ಮುಂದೆ ತಮ್ಮ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ (Blue Tick) ಲಭ್ಯವಾಗಬೇಕೆಂದರೆ ಬಳಕೆದಾರರು ಚಂದದಾರರಾಗಬೇಕೆಂಬ ಎಂಬ ಮಾಹಿತಿ ಹೊರಬಿದ್ದಿದೆ.
ವರದಿಯ ಪ್ರಕಾರ, ಇನ್ನು ಮುಂದೆ ಟ್ವಿಟರ್ನ ಸೀಮಿತ ಬಳಕೆದಾರರಿಗೆ ಮಾತ್ರ ಬ್ಲೂ ಟಿಕ್ ಲಭಿಸಲಿದೆ. ಜತೆಗೆ ಬ್ಲೂ ಟಿಕ್ಗಾಗಿ ಬಳಕೆಗಾಗಿ ಪ್ರತಿ ತಿಂಗಳು (Blue Tick) 1600 ರೂ. ಮೊತ್ತವನ್ನು ಟ್ವಿಟರ್ ನಿಗದಿಪಡಿಸಿದೆ. ಇನ್ನು ಮುಂದೆ ಟ್ವಿಟರ್ಗೆ ಚಂದದಾರರಾದರೆ ಮಾಡಿರುವ ಟ್ವೀಟ್ನ್ನು ಎಡಿಟ್ ಮತ್ತು ಅಳಿಸಿ (Undo) ಹಾಕುವ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವರದಿಯಾಗಿದೆ.
ಈಗಾಗಲೇ ಬ್ಲೂ ಟಿಕ್ (Blue Tick) ಹೊಂದಿರುವ ಬಳಕೆದಾರರು 90 ದಿನಗಳ ಒಳಗಾಗಿ ನಿಗದಿತ ಮೊತ್ತ ಪಾವತಿಸಿ ಬ್ಲೂ ಟಿಕ್ (Blue Tick) ಮುಂದುವರಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮವನ್ನು ಟ್ವಿಟರ್ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಸದ್ಯ ಎಲಾನ್ ಮಸ್ಕ್ ಟ್ವಿಟರ್ನ್ನು ಖರೀದಿಸುತ್ತಿದ್ದಂತೆ ಟ್ವಿಟರ್ನ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ.