ಕಣ್ಣೂರು: ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್‍ನ ಕಾರ್ಯಕರ್ತರನ್ನು ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದ ಬ್ಲಾಕ್‍ನಿಂದ ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನ ಆರನೇ ಬ್ಲಾಕ್ ನಿಂದ ಫೆÇೀನ್ ವಶಪಡಿಸಿಕೊಳ್ಳಲಾಗಿದೆ. ಮೂರು ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎನ್‍ಐಎ ತನಿಖೆಯ ನಿಮಿತ್ತ ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ನಡೆಸಿದ ಹರತಾಳದ ವೇಳೆ ಹಿಂಸಾಚಾರ ಎಸಗಿದ ಆರೋಪಿಗಳನ್ನು 6ನೇ ಬ್ಲಾಕ್‍ನಲ್ಲಿ ಇರಿಸಲಾಗಿದೆ. ಪೋನ್ ಕಾಣಿಸದಂತೆ ತೆಂಗಿನ ಮರದ ಮೇಲೆ ಬಚ್ಚಿಟ್ಟಿದ್ದರು.
ವಳಪಟ್ಟಣಂ ಮೂಲದ ಅಬ್ದುಲ್ ಅಜೀಜ್ ಮಂಗಳವಾರ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಭೇಟಿಯಾಗಲು ಜೈಲಿಗೆ ಬಂದಿದ್ದ. ಅವನ ಬಳಿ ಬೀಡಿ ಇತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜೈಲಿನಲ್ಲಿ ಪೋನ್ ಬಚ್ಚಿಟ್ಟಿರುವುದು ಸ್ಪಷ್ಟವಾಯಿತು. ಇದರೊಂದಿಗೆ ತಪಾಸಣೆ ಆರಂಭವಾಯಿತು. ಬೀಡಿ ಕೊಡಿ ಎಂದು ದೂರವಾಣಿಯಲ್ಲಿ ಕರೆ ಮಾಡಿದ್ದಾಗಿ ಅಬ್ದುಲ್ ಅಜೀಜ್ ಪೋಲೀಸರಿಗೆ ತಿಳಿಸಿದ್ದಾನೆ.
ಬ್ಯಾಟರಿ ತೆಗೆದು ಪೋನ್ ಅನ್ನು ತೆಂಗಿನ ಮರದಲ್ಲಿ ಬಚ್ಚಿಡಲಾಗಿತ್ತು. ಜೈಲಿನಲ್ಲಿ ಅವರನ್ನು ಭೇಟಿ ಮಾಡಲು ಬಂದವರೇ ನೀಡಿದ್ದರು ಎಂಬುದು ಪ್ರಾಥಮಿಕ ತೀರ್ಮಾನ. ಘಟನೆ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಪೋನ್ ಬಳಸಿದ್ದಾರೆಯೇ ಎಂಬುದನ್ನು ಪ್ರಮುಖವಾಗಿ ಪರಿಶೀಲಿಸಲಾಗುತ್ತದೆ.
"ಬೀಡಿ ಕೇಳಿ ಜೈಲಿನಿಂದ ಫೆÇೀನ್"; ಕಣ್ಣೂರು ಸೆಂಟ್ರಲ್ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಸೆಲ್ ನಿಂದ ಮೊಬೈಲ್ ಪೋನ್ ವಶ
0
ಅಕ್ಟೋಬರ್ 12, 2022