ಕಾಸರಗೊಡು : ಕಾಸರಗೋಡಿನ ವಕೀಲರ ಸಂಘದ ಕಾರ್ಯದರ್ಶಿ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಜಿಲ್ಲಾಧಿಕಾರಿ ವಿರುದ್ದ ನ್ಯಾಯಾಂಗ ನಿಂದನೆ ಆರೋಪ ಹೊರಿಸಿದ ಅಪೂರ್ವ ಘಟನೆಯೊಂದು ನಡೆದಿದೆ.
2021 ರಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೇಪೋಡು ಅವರು ತಮ್ಮ ಆತ್ಮ ರಕ್ಷಣೆಗೆ ರಿವಾಲ್ವರ್ ಲೈಸೆನ್ಸ್ ಗಾಗಿ ಹರ್ಜಿ ಸಮರ್ಪಿಸಿದ್ದರು. ಕಾಸರಗೋಡು ಜಿಲ್ಲಾಧಿಕಾರಿ ಪೋಲೀಸ್, ತಹಸಿಲ್ದಾರ್ ಹಾಗೂ ಅರಣ್ಯ ಇಲಾಖೆಗೆ ಅರ್ಜಿದಾರರ ಅರ್ಜಿ ಬಗ್ಗೆ ವರದಿ ಸಮರ್ಪಿಸಲು ಆದೇಶಿಸಿದ್ದರು. ಜಿಲ್ಲಾ ಕಲೆಕ್ಟರ್ ಅರ್ಜಿದಾರರಾದ ನ್ಯಾಯವಾದಿಗೆ ಆಯುಧ ಹಾಗೂ ಮದ್ದು ಗುಂಡು ತರಬೇತಿಯನ್ನು ಪಡೆದು ಸರ್ಟಿಫಿಕೇಟ್ ಹಾಜರುಪಡಿಸಲು ಸೂಚಿಸಿದ್ದರು.
ಅರ್ಜಿದಾರರು ಈಗಾಗಲೇ ತಮ್ಮ ಕೃಷಿ ರಕ್ಷಣೆಗಾಗಿ ಬಂದೂಕನ್ನು ಹೊಂದಿರುವವರಾಗಿದ್ದದರಿಂದ ಆಯುಧ ಹಾಗೂ ಮದ್ದು ಗುಂಡು ತರಬೇತಿ ತಮಗೆ ಅಗತ್ಯವಿಲ್ಲ ಮಾತ್ರವಲ್ಲದೆ ಕಾನೂನಿನ ಪ್ರಕಾರ ಆಯುಧ ಲೈಸೆನ್ಸ್ ಅರ್ಜಿಯನ್ನು 60 ದಿವಸಗಳ ಒಳಗಾಗಿ ಜಿಲ್ಲಾಧಿಕಾರಿ ತೀರ್ಪು ಕಲ್ಪಿಸಲು ಬದ್ದರಗಿರುತಾರೆ ಎಂಬುದಾಗಿ ಜಿಲ್ಲಾ ಕಲೆಕ್ಟರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈ ಕೋರ್ಟ್ ಕಲಾಪದ ಸಂದರ್ಭದಲ್ಲಿ ಜಿಲ್ಲಾ ಕಲೆಕ್ಟರ್ ಹೈ ಕೋರ್ಟಿಗೆ ಅರ್ಜಿದಾರರ ಅರ್ಜಿಯ ಮೇಲೆ ಪೆÇಲೀಸ್ ಹಾಗೂ ಅರಣ್ಯ ಇಲಾಖೆಯ ರಿಪೆÇೀರ್ಟ್ ದೊರೆತಿರುತ್ತದೆ ಆದರೆ ತಹಸಿಲ್ದಾರರ ರಿಪೆÇೀರ್ಟ್ ದೊರೆಯಬೇಕμÉ್ಟ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು. ಅರ್ಜಿದಾರರ ಹಾಗೂ ಜಿಲ್ಲಾ ಕಲೆಕ್ಟರ್ ಪರ ವಾದವನ್ನು ಆಲಿಸಿದ ನ್ಯಾಯಾಲಯವು ತಹಸಿಲ್ದಾರರ ರಿಪೆÇೀರ್ಟ್ ಸಿಕ್ಕಿದ ಒಂದು ತಿಂಗಳ ಒಳಗಾಗಿ ಅರ್ಜಿದಾರರ ಹರ್ಜಿಗೆ ತೀರ್ಪು ನೀಡಬೇಕೆಂದು ಕಾಸರಗೋಡು ಜಿಲ್ಲಾ ಕಲೆಕ್ಟರಿಗೆ ಆದೇಶಿಸಿತ್ತು. ತಹಸಿಲ್ದಾರರ ರಿಪೆÇೀರ್ಟ್ ದೊರಕಿ ಹೈಕೋರ್ಟಿನ ಆದೇಶದ ಪ್ರಕಾರ ಒಂದು ತಿಂಗಳ ಒಳಗಾಗಿ ಯಾವುದೇ ತೀರ್ಪನ್ನು ನೀಡದೆ ಇದ್ದದ್ದರಿಂದ ಅರ್ಜಿದಾರರಾದ ನ್ಯಾಯವಾದಿ ಪ್ರದೀಪ್ ರಾವ್ ಮೇಪೆÇೀಡು ಜಿಲ್ಲಾ ಕಲೆಕ್ಟರ್ ಶ್ರೀಮತಿ ಸ್ವಾಗತ್ ರನ್ವೀರ್ ಚಂದ್ ಭಂಡಾರಿ ಅವರು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಅದಕ್ಕೆ ಹೈಕೋರ್ಟ್ ಅವರಿಗೆ ತಕ್ಕದಾದ ಶಿಕ್ಷೆಯನ್ನು ನೀಡಬೇಕೆಂದು ಮಾನ್ಯ ಹೈಕೋರ್ಟ್ ಅಲ್ಲಿ ಜಿಲ್ಲಾ ಕಲೆಕ್ಟರ್ ವಿರುದ್ಧ ಕಂಟೆಂಪ್ಟ್ ಆಫ್ ಹೈ ಕೋರ್ಟ್ ಆರ್ಡರ್ ಹರ್ಜಿ ಸಲ್ಲಿಸಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿಯಿಂದ ನ್ಯಾಯಾಂಗ ನಿಂದನೆ: ಹೈಕೋರ್ಟ್ ಮೆಟ್ಟಿಲೇರಿದ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು
0
ಅಕ್ಟೋಬರ್ 12, 2022
Tags