ಕಾಸರಗೋಡು: ಪೆÇೀಕ್ಸೊ ನ್ಯಾಯಾಲಯಗಳು ಮಕ್ಕಳ ಬಗ್ಗೆ ಹೆಚ್ಚಿನ ಸಹಾನುಭೂತಿ ಹೊಂದಿರಬೇಕು ಎಂಬುದಾಗಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ತಿಳಿಸಿದ್ದಾರೆ. ಅವರು ವಿದ್ಯಾನಗರದಲ್ಲಿರುವ ಕುಟುಂಬ ನ್ಯಾಯಾಲಯ ಕಟ್ಟಡದ ಮೇಲಿನ ಮಹಡಿಯಲ್ಲಿ ನಿರ್ಮಿಸಲಾದ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು. ಸಹಾನುಭೂತಿ ಮತ್ತು ಸ್ವೀಕಾರಾರ್ಹ ನಿಲುವಿನೊಂದಿಗೆ ಮಾತ್ರ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನ್ಯಾಯ ಒದಗಿಸಲು ಸಾಧ್ಯ. ಪೋಕ್ಸೋ ನ್ಯಾಯಾಲಯಗಳು ಇತರನ್ಯಾಯಾಲಯಗಳಿಗಿಂತ ಭಿನ್ನವಾಗಿದ್ದು, ಪ್ರಕರಣಗಳಿಗೆ ಅತಿ ಶೀಘ್ರ ತೀರ್ಪು ಕಲ್ಪಿಸುವ ಸ್ಥಳವಾಗಿದೆ. ಮಕ್ಕಳು ತಮ್ಮ ಪೆÇೀಷಕರಿಂದ ಪಡೆಯುವ ಅದೇ ಕಾಳಜಿಯನ್ನು ಪೆÇೀಕ್ಸೊ ನ್ಯಾಯಾಲಯಗಳಿಂದ ಪಡೆಯುವಂತಾಗಬೇಕು. ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ ದೇಶದ ವಿರುದ್ಧದ ಹಿಂಸೆಯಾಗಿದೆ. ಮಕ್ಕಳು ಹಿಂಸೆಗೆ ಒಳಗಾದಾದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಕುತ್ತುಂಟಾದಂತೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅಭಿಪ್ರಾಯಪಟ್ಟರು. ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶ ಸಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಎಚ್ ಕುಞಂಬು, ಎ.ಕೆ.ಎಂ.ಅಶ್ರಫ್, ಹೊಸದುರ್ಗ ವಕೀಲರ ಸಂಘದ ಅಧ್ಯಕ್ಷ ಎನ್.ರಾಜಮೋಹನ್, ಮಧೂರು ಗ್ರಾ.ಪಂ. ಅಧ್ಯಕ್ಷ ಕೆ.ಗೋಪಾಲಕೃಷ್ಣ, ಜಿಲ್ಲಾ ಸರ್ಕಾರಿ ಅಭಿಯೋಜಕ ಕೆ.ದಿನೇಶ್ ಕುಮಾರ್, ಕಾಸರಗೋಡು ವಕೀಲ ಗುಮಾಸ್ತರ ಸಂಘದ ಅಧ್ಯಕ್ಷ ನಾರಾಯಣ ಮಣಿಯಾಣಿ ಉಪಸ್ಥಿತರಿದ್ದರು. ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ವಕೀಲ ಎಂ.ನಾರಾಯಣ ಭಟ್ ಸ್ವಾಗತಿಸಿದರು. ಕಾಸರಗೋಡು ಮುಖ್ಯ ನ್ಯಾಯಿಕ ದಂಡಾಧಿಕಾರಿ ಕೆ.ಜಿ.ಉಣ್ಣಿಕೃಷ್ಣನ್ ವಂದಿಸಿದರು.
ಮೂರು ಪೆÇೀಕ್ಸೊ ನ್ಯಾಯಾಲಯಗಳು:
ವಿದ್ಯಾನಗರದಲ್ಲಿ ತ್ವರಿತಗತಿಯ ವಿಶೇಷ ನ್ಯಾಯಾಲಯದ ಉದ್ಘಾಟನೆಯೊಂದಿಗೆ, ಜಿಲ್ಲೆಯಲ್ಲಿ ಪ್ರಸಕ್ತ ಪೆÇೀಕ್ಸೊ ನ್ಯಾಯಾಲಯಗಳ ಸಂಖ್ಯೆ ಮುರಕ್ಕೇರಿದೆ. ವಿದ್ಯಾನಗರದಲ್ಲಿರುವ ಕುಟುಂಬ ನ್ಯಾಯಾಲಯದ ಕಟ್ಟಡದ ಮೇಲಿನ ಮಹಡಿಯಲ್ಲಿ ನೂತನ ಫಾಸ್ಟ್ ಟ್ರ್ಯಾಕ್ ಕೋರ್ಟ್ ಕಾರ್ಯಾಚರಿಸುತ್ತಿದ್ದು, ಹೊಸ ನ್ಯಾಯಾಲಯಕ್ಕೆ ನ್ಯಾಯಾಧೀಶರು ಹಾಗೂ ಸಿಬ್ಬಂದಿ ಅಧಿಕಾರ ವಹಿಸಿಕೊಂಡರು. ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಗೊಂಡ ನಂತರ ನ್ಯಾಯಾಲಯವು ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ. ವಿದ್ಯಾನಗರದಲ್ಲಿರುವ ಪೋಕ್ಸೋ ನ್ಯಾಯಾಲಯವು ರಾಜ್ಯದಲ್ಲಿ ಮಂಜೂರಾದ 28 ನ್ಯಾಯಾಲಯಗಳಲ್ಲಿ ಒಂದಾಗಿದೆ. ನ್ಯಾಯಾಲಯ ಸಂಪೂರ್ಣವಾಗಿ ಮಕ್ಕಳ ಸ್ನೇಹಿಯಾಗಿದ್ದು, ಮಕ್ಕಳ ಸ್ನೇಹಿ ಆಸನ ಮತ್ತು ಗೋಡೆಗಳ ಮೇಲೆ ಚಿತ್ರಗಳ ರಚನೆಯೊಂದಿಗೆ ಮಕ್ಕಳ ಸ್ನೇಹಿ ವಾತಾವರಣವಿದೆ.
ಪೆÇೀಕ್ಸೊ ನ್ಯಾಯಾಲಯಗಳು ಮಕ್ಕಳ ಬಗ್ಗೆ ಹೆಚ್ಚಿನ ಸಹಾನುಭೂತಿ ಹೊಂದಿರಬೇಕು-ನ್ಯಾಯಮೂರ್ತಿ ದೇವನ್ ರಾಮಚಂದ್ರನ್
0
ಅಕ್ಟೋಬರ್ 24, 2022