ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ದೀಪಾವಳಿ ಆಚರಿಸಲಾಯಿತು.
ವಲಯ ಸಮಿತಿ ಅಧ್ಯಕ್ಷ ರಾಜೇಂದ್ರನ್ ಹಾಗೂ ಕಾರ್ಯದರ್ಶಿ ಸುನಿಲ್. ಪಿ.ಟಿ. ಹಣತೆ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭ ಯೂನಿಟ್ ಅಧ್ಯಕ್ಷ ರತೀಶ್, ಕಾರ್ಯದರ್ಶಿ ವಸಂತ್ ಕೆರೆಮನೆ, ಜತೆ ಕಾರ್ಯದರ್ಶಿವಿಶಾಕ್, ಕೋಶಾಧಿಕಾರಿ ಅಮಿತ್, ಅಸೋಸಿಯೇಶನ್‍ಜಲ್ಲಾ ಕಾರ್ಯದರ್ಶಿ ವಾಸು.ಎ, ಜಿಲ್ಲಾ ಜತೆಕಾರ್ಯದರ್ಶಿ ಚಂದ್ರಶೇಖರ ವಲಯ ಉಪಾಧ್ಯಕ್ಷ ಮೈಂದಪ್ಪ ಹಿರಿಯ ಛಾಯಾಗ್ರಾಹಕರಾದ ಜಯಪ್ರಕಾಶ್ ಹಾಗೂ ಯೂನಿಟ್ ಸದಸ್ಯರು ಉಪಸ್ಥಿತರಿದ್ದರು. ಯುನಿಟ್ ಅಧ್ಯಕ್ಷ ರತೀಶ್ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.