ಪೆರ್ಲ: ಕೇಂದ್ರ ವಿಸೃತ ಯೋಜನೆಯಾಗಿ ರಾಜ್ಯ ಸಾಕ್ಷರತಾ ಮಿಷನ್ ಮೂಲಕ ಜಾರಿಗೊಳ್ಳುತ್ತಿರುವ ನ್ಯೂ ಇಂಡಿಯ ಲಿಟ್ರೆಸಿ ಕಾರ್ಯ ಯೋಜನೆಯ ಸರ್ವೆಗೆ ಎಣ್ಮಕಜೆ ಗ್ರಾ.ಪಂ.ಮಟ್ಟದಲ್ಲಿ ಚಾಲನೆ ನೀಡಲಾಯಿತು. 16ನೇ ವಾರ್ಡಿನ ಬಜಕೂಡ್ಲಿನಲ್ಲಿ ನಡೆದ ಕಾರ್ಯಕ್ರಮವನ್ನು ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಭಿ ಹನೀಫ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ದೇವಕಿ ಬಜಕೂಡ್ಲು ಅವರ ಮನೆಗೆ ಭೇಟಿ ನೀಡಿ ಸರ್ವೆ ನಡೆಸಲಾಯಿತು. ಮಂಜೇಶ್ವರ ಬ್ಲಾಕ್ ಪ್ರೇರಕ್ ಪರಮೇಶ್ವರ ನಾಯ್ಕ್, ಪಂಚಾಯತು ಪ್ರೇರಕ್ ಆನಂದ ಕೆ.ಮೊದಲಾದವರು ಭಾಗವಹಿಸಿದ್ದರು.ಶಾರದಾ, ದಿವ್ಯ ಸರ್ವೆಗೆ ಸಹಕರಿಸಿದರು.
ಎಣ್ಮಕಜೆ ಪಂಚಾಯತು ಮಟ್ಟದಲ್ಲಿ ನ್ಯೂ ಇಂಡಿಯ ಲಿಟ್ರೆಸಿ ಪೆÇ್ರೀಗ್ರಾಂನ ಸರ್ವೆಗೆ ಚಾಲನೆ
0
ಅಕ್ಟೋಬರ್ 09, 2022
Tags