ಬೆಂಗಳೂರು: ಇತ್ತೀಚೆಗೆ 300 ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಐಟಿ ಮೇಜರ್ ವಿಪ್ರೋ ಇದೀಗ ಅಕ್ಟೋಬರ್ 10ರಿಂದ ಉದ್ಯೋಗಿಗಳನ್ನು ಕಚೇರಿಗೆ ಬರುವಂತೆ ಸೂಚಿಸಿದೆ.
ವಿಪ್ರೋ ತಮ್ಮ ಉದ್ಯೋಗಿಗಳಿಗೆ, 'ಅಕ್ಟೋಬರ್ 10ರಿಂದ ಕಚೇರಿಗಳಿಗೆ ಬರುವಂತೆ ಸೂಚಿಸಿದೆ. ಇದೇ ವೇಳೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಕಚೇರಿ ತೆರೆದಿರುತ್ತದೆ. ಇನ್ನು ಬುಧವಾರ ಒಂದು ದಿನ ಮುಚ್ಚಿರುತ್ತದೆ. ಈ ನಾಲ್ಕು ದಿನಗಳಲ್ಲಿ ಕನಿಷ್ಠ ಮೂರು ದಿನಗಳಲ್ಲಿ ಕಚೇರಿಯಿಂದ ಕೆಲಸ ಮಾಡಲು ನೌಕರರಿಗೆ ಸೂಚಿಸಿದೆ.
ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮಾಡೆಲ್ನ್ನು ಕೊನೆಗೊಳಿಸಲು ಮತ್ತು ಹೈಬ್ರಿಡ್ ಮಾದರಿಗೆ ಬದಲಾಗುತ್ತಿರುವ ಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವಿಪ್ರೋ ಹೇಳಿದೆ.
ಏತನ್ಮಧ್ಯೆ, ಹೊಸದಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳ ನೇಮಕ ಪ್ರಕ್ರಿಯೆ ವಿಳಂಬದ ವಿಷಯದ ಕುರಿತು ವಿಪ್ರೋ ತನ್ನ ಹೇಳಿಕೆಯಲ್ಲಿ, ಅರ್ಹ ಅಭ್ಯರ್ಥಿಗಳಿಗೆ ಮಾಡಿದ ಎಲ್ಲಾ ಆಫರ್ ಲೆಟರ್‌ಗಳನ್ನು ಹಂತ ಹಂತವಾಗಿ ನೀಡುವುದಾಗಿ ಹೇಳಿದೆ. ಏತನ್ಮಧ್ಯೆ, Nascent Information Technology Employees Senate (NITES) ಅವರು 2021ರ ಸೆಪ್ಟೆಂಬರ್ ಮತ್ತು 2022ರ ಜನವರಿ ನಡುವೆ ವಿಪ್ರೋ ಆಫರ್ ಲೆಟರ್‌ಗಳನ್ನು ನೀಡಿದ ವಿದ್ಯಾರ್ಥಿಗಳಿಂದ ಮಾಹಿತಿಯನ್ನು ಸ್ವೀಕರಿಸಿದ್ದೇವೆ ಎಂದಿದೆ.
ಈ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಿಪ್ರೋದ ಮೇಲೆ ನಂಬಿಕೆ ಇಟ್ಟುಕೊಂಡು ಇತರ ಕಂಪನಿಗಳ ಕೊಡುಗೆಗಳನ್ನು ತಿರಸ್ಕರಿಸಿದ್ದಾರೆ. ಕಂಪನಿಯು ಒಂದು ದಿನ ಅವರನ್ನು ನೇಮಿಸಿಕೊಳ್ಳುತ್ತದೆ ಎಂದು NITES ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.