ನವದೆಹಲಿ: 2021-22ರ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಬರೋಬ್ಬರಿ ₹ 614.53 ಕೋಟಿ ದೇಣಿಗೆ ಹರಿದು ಬಂದಿದೆ ಎಂದು ಚುನಾವಣಾ ಆಯೋಗ ನೀಡಿದ ಮಾಹಿತಿಯಿಂದ ಗೊತ್ತಾಗಿದೆ.
ಇದು ಕಾಂಗ್ರೆಸ್ ಪಕ್ಷಕ್ಕೆ ಸಂದಾಯವಾದ ದೇಣಿಗೆಗಿಂತ 6 ಪಟ್ಟು ಹೆಚ್ಚು.
ಇದೇ ಅವಧಿಯಲ್ಲಿ ಕಾಂಗ್ರೆಸ್‌ಗೆ ದೇಣಿಗೆ ರೂಪದಲ್ಲಿ ಸಿಕ್ಕಿದ್ದು ₹ 95.46 ಕೋಟಿ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ಗೆ ₹ 43 ಲಕ್ಷ ದೇಣಿಗೆ ಲಭಿಸಿದರೆ, ಕೇರಳದಲ್ಲಿ ಆಡಳಿತದಲ್ಲಿರುವ ಸಿಪಿಐ(ಎಂ)ಗೆ ₹ 10.05 ಕೋಟಿ ರೂ. ದೇಣಿಗೆ ಸಿಕ್ಕಿದೆ.
ತಮ್ಮ ಆದಾಯದ ಬಗ್ಗೆ ಈ ನಾಲ್ಕು ರಾಷ್ಟ್ರೀಯ ಪಕ್ಷಗಳು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದವು.