ಚೆನ್ನೈ: ಪ್ರಾಚೀನ ವಿಗ್ರಹಗಳ ಅಂತರರಾಷ್ಟ್ರೀಯ ವ್ಯಾಪಾರಿ ಸುಭಾಶ್ಚಂದ್ರ ಕಪೂರ್ ಹಾಗೂ ಆತನ ಐವರು ಸಹಾಯಕರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕುಂಭಕೋಣಂನ ವಿಚಾರಣಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಉದಯರ್‌ಪಾಳ್ಯಂನಲ್ಲಿ ₹ 94 ಕೋಟಿ ಮೌಲ್ಯದ 19 ಪ್ರಾಚೀನ ವಿಗ್ರಹಗಳನ್ನು ಕಳ್ಳತನ ಮಾಡಿ, ನ್ಯೂಯಾರ್ಕ್‌ನ ಆರ್ಟ್ ಆಫ್ ದಿ ಪಾಸ್ಟ್ ಗ್ಯಾಲರಿಗೆ ರಫ್ತು ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ ಎಂದು ಸಿಐಡಿ ತಿಳಿಸಿದೆ.