ಮಾದಕ ದ್ರವ್ಯ ಸೇವಿಸುವವರು ಜೈಲು ಪಾಲಾಗಲಿದ್ದಾರೆ: ಎಚ್ಚರಿಕೆ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ: 100ನೇ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ಉದ್ಘಾಟಿಸಿ ಹೇಳಿಕೆ
0
ನವೆಂಬರ್ 11, 2022
ಕಾಸರಗೋಡು: ಮಾದಕ ದ್ರವ್ಯ ಸೇವಿಸುವವರ ವಿರುದ್ಧ ಜಿಲ್ಲಾ ಪೋಲೀಸ್ ವರಿಷ್ಠರು ಕಠಿಣ ಕ್ರಮದ ಸೂಚನೆನೀಡಿದ್ದು, ಅಂತಹವರು ತಮ್ಮ ಜೀವಿತಾವಧಿಯನ್ನು ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ ಎಂದು ವರಿಷ್ಠ ಡಾ.ವೈಭವ್ ಸಕ್ಸೇನಾ ಎಚ್ಚರಿಸಿದರು.
ಹೊಸದುರ್ಗ ಜನಮೈತ್ರಿ ಪೋಲೀಸ್, ರಾವಣೇಶ್ವರಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಜ್ಯ ಸರ್ಕಾರದ ಯೋಧಾವ್ ಯೋಜನೆ ಹಾಗೂ ಜಿಲ್ಲಾ ಪೋಲೀಸ್ ಆಪರೇಷನ್ ಕ್ಲೀನ್ ಕಾಸರಗೋಡು ಅಂಗವಾಗಿ ಆಯೋಜಿಸಿದ್ದ 100ನೇ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಂಶುಪಾಲ ಕೆ.ಜಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ತರಗತಿ ನಡೆಸಿದರು. ನಗರಸಭೆ ಅಧ್ಯಕ್ಷ ಕೆ.ಶಶಿ, ಎಂ.ಸುನಿತಾ, ಮುಖ್ಯಶಿಕ್ಷಕ ಕೆ.ಪಿ. ಸುರೇಂದ್ರನ್, ಸಿ.ಪ್ರವೀಣ್ ಕುಮಾರ್, ಜನಮೈತ್ರಿ ಬೀಟ್ ಅಧಿಕಾರಿಗಳಾದ ಕೆ.ರಂಜಿತ್ ಕುಮಾರ್, ಟಿ.ವಿ.ಪ್ರಮೋದ್ ಮಾತನಾಡಿದರು. ಇನ್ಸ್ ಪೆಕ್ಟರ್ ಕೆ.ಪಿ. ಶೈನ್ ಸ್ವಾಗತಿಸಿ, ಸಿ.ಅನಿಶ್ ವಂದಿಸಿದರು.
ಠಾಣೆ ವ್ಯಾಪ್ತಿಯಲ್ಲಿ ಶಾಲೆಗಳು, ಕ್ಲಬ್‍ಗಳು, ಕುಟುಂಬಶ್ರೀ ಘಟಕಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ತರಗತಿಗಳನ್ನು ನಡೆಸಲಾಗುತ್ತದೆ. ಜನಮೈತ್ರಿ ಪೋಲೀಸರು ವಿವಿಧೆಡೆ ಸ್ಥಳೀಯ ನಿವಾಸಿಗಳನ್ನು ಒಳಗೊಂಡ ಜಾಗೃತ ಸಮಿತಿಗಳನ್ನು ರಚಿಸಿ, ಮಾದಕ ವ್ಯಸನಿಗಳನ್ನು ಚಿಕಿತ್ಸಾ ಕೇಂದ್ರಗಳಿಗೆ ಕರೆತರಲು ಮತ್ತು ಜಾಗೃತಿ ಚಟುವಟಿಕೆಯ ಭಾಗವಾಗಿ ವಿವಿಧೆಡೆ ಮಾನವ ಸರಪಳಿ, ಫ್ಲ್ಯಾμï ಮಾಬ್, ನಾಟಕಗಳು, ರ್ಯಾಲಿ, ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಯೋಜನೆ ಹಮ್ಮಿಕೊಂಡಿದ್ದಾರೆ.