ನವದೆಹಲಿ: ವಾಟ್ಸ್ಆಯಪ್ ತನ್ನ ಬಳಕೆದಾರರಿಗೆ ಹೊಸದಾಗಿ 3 ಫೀಚರ್ಗಳನ್ನು ಪರಿಚಯಿಸುತ್ತಿದೆ. ಇನ್ನು ಮುಂದೆ ವಾಟ್ಸ್ಆಯಪ್ ಗ್ರೂಪ್ಗಳಲ್ಲಿ 1024 ಜನರನ್ನು ಸದಸ್ಯರನ್ನಾಗಿಸುವ ಅವಕಾಶ ನೀಡಿದೆ. ಇದರೊಂದಿಗೆ ವಿಡಿಯೋ ಕರೆಯಲ್ಲಿ 32 ಮಂದಿ ಒಟ್ಟಿಗೆ ಮಾತನಾಡಬಹುದು.
ಜತೆಗೆ ಚಾಟ್ಪೋಲ್ ನಡೆಸುವ ಸೌಲಭ್ಯವನ್ನು ನೀಡುತ್ತಿದೆ.
ಸದ್ಯ ವಾಟ್ಸ್ಆಯಪ್ ಗ್ರೂಪುಗಳಲ್ಲಿ 512 ಜನರಿಗೆ ಮಾತ್ರ ಸದಸ್ಯರಾಗಲು ಸಾದ್ಯವಿತ್ತು. ಇದೀಗ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಒಟ್ಟು ಸದಸ್ಯರ ಸಂಖ್ಯೆಯನ್ನು 1024ಕ್ಕೆ ಹೆಚ್ಚಿಸಿದ್ದಾರೆ.
ಮುಂದಿನ ಹಂತದಲ್ಲಿ ಚಾಟ್ ಪೋಲ್‌ಗಳನ್ನು ರಚಿಸುವ ಅವಕಾಶವನ್ನು ವಾಟ್ಸ್ಆಯಪ್ ನೀಡಲು ಮುಂದಾಗಿದೆ. ಇದರಿಂದ ನಿಖರವಾದ ವಿಷಯದ ಬಗೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
ವೀಡಿಯೊ ಕರೆ ಮಾಡುವ ಸಂದರ್ಭದಲ್ಲಿ 32-ವ್ಯಕ್ತಿಗಳ ಜತೆಗೆ ಇನ್ನು ಮುಂದೆ ಮಾತನಾಡಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿವಿಧ ಸಂದರ್ಭದಲ್ಲಿ ಚರ್ಚೆಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಇತ್ತೀಚೆಗೆಷ್ಟೇ ವಾಟ್ಸ್ಆಯಪ್ ಅವತಾರ್ ಇಮೋಜಿಗಳನ್ನು ಪರಚಯಿಸುವುದಾಗಿ ತಿಳಿಸಿತ್ತು. ಸದ್ಯ ಹೊಸದಾಗಿ ಸೇರ್ಪಡೆಯಾಗುತ್ತಿರುವ ಮೂರು ಫೀಚರ್ಗಳು ಮುಂದಿನ ತಿಂಗಳಿನಿಂದ ಬಳಕೆಗೆ ಅವಕಾಶವಿದೆ ಎಂದು ಕಂಪೆನಿ ತಿಳಿಸಿದೆ.