HEALTH TIPS

ಕಾಸರಗೋಡಿನ ಅಳಿಯನಿಂದ ₹107 ಕೋಟಿ ವಂಚನೆ: ದುಬೈ ಉದ್ಯಮಿ ದೂರು

 

                ಕೊಚ್ಚಿ: ಕಾಸರಗೋಡು ನಿವಾಸಿ ಅಳಿಯ ₹107 ಕೋಟಿ ಪಡೆದು ವಂಚಿಸಿರುವುದಾಗಿ ದುಬೈನಲ್ಲಿ ನೆಲೆಸಿರುವ ಅನಿವಾಸಿ ಉದ್ಯಮಿ ಅಬ್ದುಲ್‌ ಲಾಹಿರ್‌ ಹಸನ್‌ ಎಂಬುವವರು ಆರೋಪಿಸಿದ್ದಾರೆ.

                     2017ರಲ್ಲಿ ಇವರ ಮಗಳ ಮದುವೆಯು ಕಾಸರಗೋಡಿನ ಮುಹಮ್ಮದ್‌ ಹಫೀಜ್‌ ಜೊತೆ ನಡೆದಿತ್ತು.

                   'ಹಲವು ಆಸ್ತಿಗಳನ್ನು ಹಫೀಜ್‌ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ ಮತ್ತು ಮಗಳಿಗೆ ಉಡುಗೊರೆಯಾಗಿ ನೀಡಿದ್ದ ಚಿನ್ನಾಭರಣಗಳನ್ನೂ ಪಡೆದುಕೊಂಡಿದ್ದಾನೆ' ಎಂದು ಹಸನ್‌ ಅವರು ಆಲುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

                   'ದೂರು ನೀಡಿ ಮೂರು ತಿಂಗಳಾದರೂ ಆರೋಪಿಯನ್ನು ಬಂಧಿಸುವಲ್ಲಿ ಆಲುವಾ ಪೊಲೀಸರು ವಿಫಲರಾಗಿದ್ದಾರೆ' ಎಂದೂ ಉದ್ಯಮಿ ಹೇಳಿದ್ದಾರೆ.

                    ಆರೋಪಿ ಗೋವಾದಲ್ಲಿರುವುದಾಗಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆಯನ್ನು ಗುರುವಾರ ಕ್ರೈಂ ಬ್ರಾಂಚ್‌ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

                    'ವಿವಿಧ ಕಾರಣಗಳನ್ನು ನೀಡಿ ಅಳಿಯ ತನ್ನಿಂದ ಹಣ ಪಡೆದಿರುವುದಾಗಿ' ಉದ್ಯಮಿ ದೂರಿನಲ್ಲಿ ಆರೋಪಿಸಿದ್ದಾರೆ.

                 'ವಂಚನೆ ಪ್ರಕರಣದಲ್ಲಿ ಹಸನ್‌ ಅವರ ಅಳಿಯನ ಜೊತೆ ಬೇರೆಯವರೂ ಶಾಮೀಲಾಗಿರುವ ಸಾಧ್ಯತೆ ಇದೆ' ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries