ನವದೆಹಲಿ: ಕೇಂದ್ರ ಸರ್ಕಾರ ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಆಧಾರ್ ಹೊಂದಿರುವವರು ದಾಖಲಾತಿ ದಿನಾಂಕದಿಂದ 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅದರ ದಾಖಲೆಗಳನ್ನು "ಕನಿಷ್ಠ ಒಮ್ಮೆ" ನವೀಕರಿಸಬೇಕು ಎಂದು ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ದಾಖಲೆಗಳ ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ(ಸಿಐಡಿಆರ್) ಆಧಾರ್-ಸಂಬಂಧಿತ ಮಾಹಿತಿಯ "ನಿಖರತೆಯನ್ನು" ಖಚಿತಪಡಿಸುತ್ತದೆ.
"ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆ ಗುರುತಿನ ಪುರಾವೆ(ಪಿಒಐ) ಮತ್ತು ವಿಳಾಸದ ಪುರಾವೆ(ಪಿಒಎ) ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಪೂರಕ ದಾಖಲೆಗಳನ್ನು ನವೀಕರಿಸಬೇಕು. ಇದರಿಂದ CIDR ನಲ್ಲಿ ಅವರ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಬಹುದು" ಎಂದು ಅದು ಹೇಳಿದೆ.
ಆಧಾರ್(ನೋಂದಣಿ ಮತ್ತು ನವೀಕರಣ) ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಮೂಲಕ ಬದಲಾವಣೆಗಳನ್ನು ಮಾಡಲಾಗಿದೆ.