ಮುಂಬೈ: ಪೇಟಿಎಂ ನ ಷೇರುಗಳು ಮಂಗಳವಾರದಂದು ಶೇ.11 ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ. 475.55 ರೂಪಾಯಿಗಳಿಗೆ ಷೇರುಗಳು ಕುಸಿತ ಕಂಡಿದ್ದು, ಬೆಳಿಗ್ಗೆ ಎನ್ಎಸ್ಇಯಲ್ಲಿ
ಷೇರುಗಳ ಮೌಲ್ಯ 474.30 ರೂಪಾಯಿಗಳಿಗೆ ಕುಸಿತ ಕಂಡಿತ್ತು ಎಂದು ಜಾಗತಿಕ ಬ್ರೋಕರೇಜ್
ಸಂಸ್ಥೆ ಮ್ಯಾಕ್ವಾರಿ ವರದಿ ಪ್ರಕಟಿಸಿದೆ.
ಮುಖೇಶ್ ಅಂಬಾನಿ ಅವರ ಜಿಯೋ ಫೈನಾನ್ಷಿಯಲ್ ಸೇವೆಗಳ ಪ್ರವೇಶದಿಂದ ಪೇಟಿಎಂ ಗೆ ಪ್ರಬಲ ಪೈಪೋಟಿ ಎದುರಾಗಲಿದೆ ಎಂದು ಮ್ಯಾಕ್ವಾರಿ ವಿಶ್ಲೇಷಿಸಿದೆ. 2021 ರ ನವೆಂಬರ್ ನಲ್ಲಿ ಐಪಿಒ ಪ್ರವೇಶಿಸಿದ್ದಾಗ ಮ್ಯಾಕ್ವಾರಿ, ಪೇಟಿಎಂ ನ
ಪ್ರಾರಂಭಿಕ ಷೇರುಗಳ ಕುಸಿತವನ್ನು ಅಂದಾಜಿಸಿತ್ತು. ಅಷ್ಟೇ ಅಲ್ಲದೇ ನಿಖರವಾದ ಗ್ರಾಹಕ
ವಿಭಾಗಗಳು ಮತ್ತು ಮಾರುಕಟ್ಟೆಗಳನ್ನು ಪೂರೈಸಲು JFC ಯಾವೆಲ್ಲಾ ಯೋಜನೆಗಳನ್ನು ಹೊಂದಿದೆ
ಎಂಬುದನ್ನು ಅಂದಾಜಿಸುವುದು ಕಷ್ಟವಾಗಿದ್ದರೂ ಬಜಾಜ್ ಫೈನಾನ್ಸ್ ಹಾಗೂ ಪೇಟಿಎಂ ನಂತಹ
ಫಿನ್ ಟೆಕ್ ಗಳ ಮಾದರಿಯಲ್ಲಿ ಗ್ರಾಹಕ ಮತ್ತು ವ್ಯಾಪಾರಿ ಸಾಲದ ಬಗ್ಗೆ ಹೆಚ್ಚು ಗಮನ
ಹರಿಸಬಹುದು ಎಂದು ಹೇಳಿತ್ತು.
ನಿವ್ವಳ ಮೌಲ್ಯದ ದೃಷ್ಟಿಯಿಂದ ಜಿಎಫ್ಎಸ್ ದೇಶದ 5 ನೇ ದೊಡ್ಡ ಆರ್ಥಿಕ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಲಿದೆ. ಇತ್ತ ಪೇಟಿಎಂ ನ ಷೇರು ಬೆಲೆ ಐಪಿಒ ನ ಬೆಲೆ 2,150ಕ್ಕಿಂತ ಶೇ.79 ರಷ್ಟು ಕುಸಿದಿದೆ.