ಕಾಸರಗೋಡು: ಕರ್ನಾಟಕ ಇತಿಹಾಸದ ಅಧ್ಯಯನ, ಕನ್ನಡ ಸಂಸ್ಕøತಿ, ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಟುವಟಿಕೆ ನಡೆಸುತ್ತಿರುವ ಕರ್ನಾಟಕ ಇತಿಹಾಸ ಅಕಾಡಮಿ ಬೆಂಗಳೂರು ಇದರ ಕೇರಳ ಘಟಕದ ಉದ್ಘಾಟನಾ ಸಮಾರಂಭ ನ. 12ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಜರುಗಲಿದೆ.
ಕಾರ್ಯಾಲಯದ ಉದ್ಘಾಟನೆಯನ್ನು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಕೆ. ಶ್ರೀಕಾಂತ್ ನೆರವೇರಿಸುವರು. ಕರ್ನಾಟಕ ಇತಿಹಾಸ ಅಕಾಡಮಿಯ ಕೇರಳ ಗಡಿನಾಡ ಘಟಕವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ಈ ಸಂದರ್ಭ ಘಟಕದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ ನಡೆಯುವುದು. ಘಟಕದ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸುವರು. ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಶಂಕರ ರೈ ಮಾಸ್ಟರ್, ಕರ್ನಾಟಕ ಇತಿಹಾಸ ಅಕಾಡಮಿ ದ.ಕ ಜಿಲ್ಲಾ ಘಟಕ ಅಧ್ಯಕ್ಷ, ವಕೀಲ ಮಹಮ್ಮದ್ ಅಸ್ಗರ್, ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಉಪನ್ಯಾಸಕ ಡಾ. ರಾಧಾಕೃಷ್ಣ ಬೆಳ್ಳೂರು, ಕರ್ನಾಟಕ ಬ್ಯಾರಿ ಅಕಾಡಮಿ ನಿಕಟಪೂರ್ವ ಸದಸ್ಯೆ, ಸಾಹಿತಿ ಆಯಿಷಾ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕರ್ನಾಟಕ ಇತಿಹಾಸ ಅಕಾಡಮಿ 12ರಂದು ಕಾಸರಗೋಡಿನಲ್ಲಿ ಕೇರಳ ಘಟಕ ಉದ್ಘಾಟನೆ
0
ನವೆಂಬರ್ 09, 2022