ಕೊಯಮತ್ತೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ಪ್ರಯಾಣಿಕರಿಂದ ₹6.5 ಕೋಟಿ ಮೌಲ್ಯದ 12 ಕೆ.ಜಿ ಚಿನ್ನವನ್ನು ಆದಾಯ ಗುಪ್ತಚರ ಆಧಿಕಾರಿಗಳು ವಶಪಡಿಸಿಕೊಂಡಿದ್ಧಾರೆ.
ಈ ಪ್ರಯಾಣಿಕರೆಲ್ಲ ಶಾರ್ಜಾದಿಂದ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ದಿಷ್ಟ ಮಾಹಿತಿ ಆಧರಿಸಿ ತಪಾಸಣೆ ನಡೆಸಿದ ಅಧಿಕಾರಿಗಳು ಏರ್ ಅರೇಬಿಯಾ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರ ಪ್ಯಾಂಟ್ ಜೇಬು, ಒಳ ಉಡುಪು, ಬ್ಯಾಗ್ ಮುಂತಾದೆಡೆ ಇಟ್ಟುಕೊಂಡಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶದಿಂದ ತಂದಿದ್ದ ಸುಮಾರು 12 ಕೆ.ಜಿ ಚಿನ್ನದ ಮೌಲ್ಯ ಸುಮಾರು ₹6.5 ಕೋಟಿ ಎಂದು ಅಂದಾಜಿಸಲಾಗಿದೆ.
ಚೆನ್ನೈ ಮೂಲದ ಸುರೇಶ್ ಕುಮಾರ್, ಕಡಲೂರಿನ ಶಂಕರ್, ಪರಮ್‌ಕುಡಿಯ ರಾಮಪ್ರಭು ಮತ್ತು ಸೇಲಂನ ಕುಮಾರ ವೇಲು ಎಂಬ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ.